ಸುಭಾಷಿತ :

Monday, February 17 , 2020 5:13 AM

ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ : ಡಿ.1ರಿಂದ ಕರೆ ದರ ದುಬಾರಿ


Thursday, November 28th, 2019 5:11 pm

ನವದೆಹಲಿ : ಇದುವರೆಗೆ ಡಿಸೆಂಬರ್ 1ರಿಂದ ಮೊಬೈಲ್ ಕರೆ ದರ ಇಳಿಕೆ ಮಾಡಲಾಗುತ್ತದೆ. ಹೆಚ್ಚು ಮಾಡೋದಿಲ್ಲ ಎಂದು ನಂಬಲಾಗಿತ್ತು. ಆದ್ರೇ, ಡಿಸೆಂಬರ್ 1ರಿಂದ ಮೊಬೈಲ್ ದರ ಕಡಿತವಿಲ್ಲ. ಏರಿಕೆ ಆಗೇ ಆಗುತ್ತದೆ ಎಂಬುದನ್ನು ಇದೀಗ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಹೇಳಿದೆ. ಈ ಮೂಲಕ ಶಾಕಿಂಗ್ ನ್ಯೂಸ್ ನೀಡಿದೆ.

ಇತ್ತೀಚಿಗೆ ಕರೆ ದರ ಏರಿಕೆಯ ಬಗ್ಗೆ ಐಡಿಯಾ ವೋಡಾಪೋನ್ ಕಂಪನಿ ಮೊದಲು ತಿಳಿಸಿತ್ತು. ಆನಂತ್ರ ಇದೇ ಹಾದಿಯನ್ನು ಏರ್ ಟೆಲ್ ಸೇರಿದಂತೆ ವಿವಿಧ ಟೆಲಿಕಾಂ ಕಂಪನಿಗಳು ಕೂಡ ಬಂದಿದ್ದವು. ಆದ್ರೇ ಕನಿಷ್ಟ ದರ ಸುಂಕವನ್ನು ನಿಗದಿಮಾಡುವ ಮೂಲಕ ಟ್ರಾಯ್ ಮೊಬೈಲ್ ಬಳಕೆದಾರರಿಗೆ ಕರೆ ದರ ಏರಿಕೆಯ ಬಿಸಿಯಿಂದ ತಪ್ಪಿಸಲಿದೆ ಎಂದು ಹೇಳಲಾಗಿತ್ತು.

ಈ ಕುರಿತಂತೆ ಟ್ರಾಯ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದು, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಕನಿಷ್ಠ ಕರೆ ಸುಂಕ ನೀಗಧಿ ಮಾಡಲು ಮಧ್ಯ ಪ್ರವೇಶಿಸುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಹೀಗಾಗಿ ಮೊಬೈಲ್ ಕರೆ ದರಗಳು ಟೆಲಿಕಾಂ ಸಂಸ್ಥೆಗಳು ಹೇಳಿದಂತೆ ಡಿಸೆಂಬರ್ 1ರಿಂದ ಏರಿಕೆಯಾಗಲಿವೆ. ಈ ಮೂಲಕ ಮೊಬೈಲ್ ಬಳಕೆದಾರರಿಗೆ ಕರೆ ದರ ಏರಿಕೆಯ ಬರೆಯನ್ನು ಎಳೆಯೋದು ಗ್ಯಾರಂಟಿ ಎಂದಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions