ಶಾಕಿಂಗ್ ನ್ಯೂಸ್ : ಭಾರತದಲ್ಲಿ ಸಮುದಾಯಕ್ಕೂ ಹಬ್ಬಿದ ಕರೋನ ವೈರಸ್, ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಕೇಂದ್ರ ಸರ್ಕಾರ – Kannada News Now


India

ಶಾಕಿಂಗ್ ನ್ಯೂಸ್ : ಭಾರತದಲ್ಲಿ ಸಮುದಾಯಕ್ಕೂ ಹಬ್ಬಿದ ಕರೋನ ವೈರಸ್, ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿನ ಜನರು ಆದಾಗ್ಲೇ ಕೊರೊನಾ ಆತಂಕದ ನಡುವೆ ಜೀವನ ಮುಂದೂಡುತ್ತಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರ ಆತಂಕಕಾರಿ ಮಾಹಿತಿಯೊಂದನ್ನ ನೀಡಿದ್ದು, ಭಾರತದಲ್ಲಿ ಸಮುದಾಯಕ್ಕೂ ಕೋವಿಡ್-19 ಎನ್ನುವ ಸತ್ಯ ಒಪ್ಪಿಕೊಂಡಿದೆ.

ಇದೇ ಮೊದಲ ಬಾರಿಗೆ ದೇಶದಲ್ಲಿ ಕೋವಿಡ್-19 ಸಮುದಾಯ ಪ್ರಸರಣದ ಹಂತದಲ್ಲಿರುವುದನ್ನ ಒಪ್ಪಿಕೊಂಡಿರುವ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಈ ಸ್ಫೋಟಕ ಮಾಹಿತಿಯನ್ನ ಸ್ವತಃ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಭಾನುವಾರ ಒಪ್ಪಿಕೊಂಡಿದ್ದಾರೆ. ಆದ್ರೆ, ಸಧ್ಯ ಈ ಪರಿಸ್ಥಿತಿ ಪ್ರಸ್ತುತ ಕೆಲವೊಂದು ರಾಜ್ಯ ಮತ್ತು ಜಿಲ್ಲೆಗಳಿಗೆ ಮಾತ್ರ ಸಿಮೀತವಾಗಿದೆ ಎಂದವರು ಹೇಳಿದ್ದಾರೆ.

ವಾರದ ವೆಬಿನಾರ್ ‘ಸಂಡೇ ಸಂವಾದ’ದಲ್ಲಿ ಸಾಮಾಜಿಕ ಮಾಧ್ಯಮಗಳ ಪ್ರೇಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದಲ್ಲಿ ಕೋವಿಡ್-19 ಸಮುದಾಯ ಪ್ರಸರಣದ ಹಂತದಲ್ಲಿರುವುದನ್ನ ಒಪ್ಪಿಕೊಂಡರು.

ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿಶೇಷವಾಗಿ ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಕೋವಿಡ್-19 ಸಮುದಾಯ ಹಂತ ತಲುಪಿರುವ ನಿರೀಕ್ಷೆಯಿದೆ. ಇದು ಕೆಲವೇ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದು, ದೇಶಾದ್ಯಂತ ಇದು ತಲುಪಿಲ್ಲ ಎನ್ನುವುದು ಸಮಾಧಾನಕಾರ ಸಂಗತಿ ಎಂದರು.
error: Content is protected !!