ವಾಷಿಂಗ್ಟನ್ : ಇತ್ತೀಚೆಗೆ ನ್ಯಾಯಾಲಯದ ಆದೇಶದ ಮೇರೆಗೆ ಬಿಡುಗಡೆ ಮಾಡಲಾದ ಆಂತರಿಕ ಫೈಜರ್ ದಾಖಲೆಗಳ ಪ್ರಕಾರ, ಫೈಜರ್‌ನ mRNA ಕೋವಿಡ್ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದ ಶೇಕಡಾ 40ಕ್ಕೂ ಹೆಚ್ಚು ಗರ್ಭಿಣಿಯರು ಗರ್ಭಪಾತಕ್ಕೆ ಒಳಗಾಗಿದ್ದಾರೆ. ಈ ಮೂಲಕ ಭಾರತ ಸರ್ಕಾರವು ಫೈಜರ್ʼನ್ನ ಆಮದು ಮಾಡಿಕೊಳ್ಳಬೇಕೆಂದು ಬಯಸುವ ಉದಾರವಾದಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ.

ದಾಖಲೆಗಳ ವಿಶ್ಲೇಷಣೆಯ ಪ್ರಕಾರ, 50 ಗರ್ಭಿಣಿಯರಲ್ಲಿ 22 ಮಹಿಳೆಯರು ತಮ್ಮ ಶಿಶುಗಳನ್ನ ಕಳೆದುಕೊಂಡಿದ್ದಾರೆ ಎಂದು ಸ್ತ್ರೀವಾದಿ ಲೇಖಕಿ ಮತ್ತು ಪತ್ರಕರ್ತೆ ಡಾ. ನವೊಮಿ ವೂಲ್ಫ್  ಸ್ಟೀವ್ ಬ್ಯಾನನ್ ವಾರ್ ರೂಮ್ ಪಾಡ್ ಕಾಸ್ಟ್ʼನಲ್ಲಿ ಬಹಿರಂಗಪಡಿಸಿದರು.

ವೂಲ್ಫ್ ತನ್ನ ವೆಬ್ಸೈಟ್ ಡೈಲಿ ಕ್ಲೌಟ್ ಮೂಲಕ ಫೈಜರ್ ದಾಖಲೆಗಳ ಸಂಶೋಧನೆ ಮತ್ತು ವಿಶ್ಲೇಷಣೆಯನ್ನ ಮುನ್ನಡೆಸುತ್ತಿದ್ದಾರೆ ಅನ್ನೋದನ್ನ ಗಮನಿಸಬೇಕು. ಪಾಡ್ಕಾಸ್ಟ್ ಸಮಯದಲ್ಲಿ, ಗರ್ಭಪಾತಗಳನ್ನ ತೋರಿಸುವ ಪ್ರತಿಕೂಲ ಘಟನೆಯ ಕಟ್ಆಫ್ ವರದಿಯು ಮಾರ್ಚ್ 13, 2021 ಮತ್ತು ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಏಪ್ರಿಲ್ 1, 2021ರಂದು ವರದಿಯನ್ನು ಸ್ವೀಕರಿಸಿದೆ ಎಂದು ವೂಲ್ಫ್ ಹೇಳಿದರು.

ಇನ್ನು ಸತ್ಯವನ್ನ ತಿಳಿದಿದ್ದರೂ ಮೌನವಾಗಿರುವ ಎಫ್ಡಿಎಯನ್ನ ಮತ್ತಷ್ಟು ಗುರಿಯಾಗಿಸಿಕೊಂಡ ಅವ್ರು, “ಏಪ್ರಿಲ್ 2021ರ ಆರಂಭದಲ್ಲಿ ಭ್ರೂಣದ ಸಾವಿನ ಭಯಾನಕ ದರದ ಬಗ್ಗೆ ಎಫ್ಡಿಎಗೆ ತಿಳಿದಿತ್ತು ಮತ್ತು ಮೌನವಾಗಿತ್ತು” ಎಂದು ಕಿಡಿಕಾರಿದ್ದಾರೆ.

ಫೈಜರ್ ಪ್ರಯೋಗದ ದತ್ತಾಂಶವು ಲಸಿಕೆ ಬಿಡುಗಡೆಯಾದಾಗಿನಿಂದ ವಿಶ್ವಾದ್ಯಂತ ಕಂಡುಬರುವ ಗರ್ಭಪಾತಗಳ ಭಾರಿ ಹೆಚ್ಚಳದೊಂದಿಗೆ ಸಂಬಂಧ ಹೊಂದಿದೆ ಎಂದು ವೂಲ್ಫ್ ಹೇಳಿದರು. ಇನ್ನು ಆಘಾತಕಾರಿಯಾಗಿ, ಸಿಡಿಸಿ, ಕಳೆದ ತಿಂಗಳಷ್ಟೇ ಇತ್ತೀಚೆಗೆ, ಗರ್ಭಿಣಿ ಮತ್ತು ಸ್ತನ್ಯಪಾನ ಮಾಡುವ “ಜನರಿಗೆ” ಪ್ರಾಯೋಗಿಕ mRNA ಲಸಿಕೆಗಳನ್ನ ಶಿಫಾರಸು ಮಾಡಿದೆ.

Share.
Exit mobile version