ಬಳ್ಳಾರಿ : ದೇವರನ್ನು ಒಲಿಸಿಕೊಳ್ಳಲು ಯುವಕನೊಬ್ಬ ವಿಲಕ್ಷಣ ಕೃತ್ಯ ಎಸಗಿದ್ದು, ಭಕ್ತಿಯ ಪರಾಕಾಷ್ಠೆ ತಲುಪಿ ಭಕ್ತನೊಬ್ಬ ನಾಲಗೆ ಕಟ್ ಮಾಡಿ ದೇವರಿಗೆ ಅರ್ಪಿಸಿದ ವಿಚಿತ್ರ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿಯಲ್ಲಿ ನಡೆದಿದೆ.
ವೀರೇಶ್ ಎಂಬ ಯುವಕ ಚಾಕುವಿನಿಂದ ನಾಲಗೆ ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ನಾಲಗೆ ಸಮೇತ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಶಂಕರಪ್ಪ ದೇವರನ್ನು ಒಲಿಸಿಕೊಳ್ಳಲು ವೀರೇಶ್ ನಾಲಗೆ ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ ಎನ್ನಲಾಗಿದೆ.
ಭಕ್ತಿಯ ಪರಾಕಾಷ್ಠೆ ತಲುಪಿದ ವೀರೇಶ್ ನಾಲಗೆ ಕಟ್ ಮಾಡಿಕೊಂಡಿದ್ದು, ಯುವಕನ ವರ್ತನೆಗೆ ಜನರು ಬೆಚ್ಚಿಬಿದ್ದಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.