ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : 14 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಶಾಲೆಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ನಡೆದಿದ್ದು, ಆಕೆಯ ಕೃತ್ಯದಿಂದ 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಕಿ ಹಚ್ಚಿದ ಬಾಲಕಿ, ಶಿಕ್ಷಕಿ ಫೋನ್ ಜಪ್ತಿ ಮಾಡಿದ್ದಕ್ಕೆ ಕೋಪಗೊಂಡಿದ್ದಳು ಎಂದು ಹೇಳಲಾಗಿದೆ. ಘಟನೆಗೂ ಮುನ್ನ ಬೆಂಕಿ ಹಚ್ಚುವ ಬೆದರಿಕೆಯನ್ನೂ ಹಾಕಿದ್ದಳು ಎನ್ನಲಾಗ್ತಿದೆ.
ಡೈಲಿ ಸ್ಟಾರ್ ವರದಿ ಪ್ರಕಾರ, ದಕ್ಷಿಣ ಅಮೆರಿಕಾದ ಗಯಾನಾದಲ್ಲಿ ಈ ಪ್ರಕರಣ ನಡೆದಿದೆ. ಸೋಮವಾರ ರಾತ್ರಿ ಮಹದಿಯಾ ಸೆಕೆಂಡರಿ ಶಾಲೆಯ ಬಾಲಕಿಯರ ಹಾಸ್ಟೆಲ್’ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ವಲ್ಪ ಸಮಯದಲ್ಲೇ ಅದು ಕಟ್ಟಡದ ಬಹುಭಾಗವನ್ನ ಆವರಿಸಿದ್ದು, ಅನೇಕ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿ ಅದರಲ್ಲಿ ಸಿಲುಕಿಕೊಂಡರು. ಕೂಡಲೇ ಅಗ್ನಿಶಾಮಕ ದಳದ ತಂಡವನ್ನ ಕರೆಸಲಾಗಿದ್ದು, ಆದರೆ ಬೆಂಕಿ ನಂದಿಸುವಷ್ಟರಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ.
ರಾಜಧಾನಿ ಜಾರ್ಜ್ ಟೌನ್’ನಿಂದ ಸುಮಾರು 200 ಮೈಲಿ ದೂರದಲ್ಲಿರುವ ಸೆಂಟ್ರಲ್ ಗಯಾನಾ ಮೈನಿಂಗ್ ಟೌನ್’ನಲ್ಲಿ ಈ ಘಟನೆ ನಡೆದಿದೆ. ಇದೀಗ ಈ ಪ್ರಕರಣದಲ್ಲಿ ಬೆಂಕಿ ಹಚ್ಚಿದವರು ಬೇರೆ ಯಾರೂ ಅಲ್ಲ ಶಾಲೆಯ ವಿದ್ಯಾರ್ಥಿನಿ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ವಿದ್ಯಾರ್ಥಿನಿಯ ಮೊಬೈಲ್’ನ್ನ ಆಕೆಯ ಶಿಕ್ಷಕಿ ಕಿತ್ತುಕೊಂಡಿದ್ದು, ಈ ಬಗ್ಗೆ ಆಕೆ ಕೋಪಕೊಂಡು ಈ ಭಯಾನಕ ಹೆಜ್ಜೆ ಇಟ್ಟಿದ್ದಾಳೆ. ವಿಪರ್ಯಾಸ ಅಂದ್ರೆ, ಆ ಬಾಲಕಿಯೂ ಬೆಂಕಿಯಲ್ಲಿ ಸುಟ್ಟು ಹೋಗಿದ್ದಾಳೆ.
ಪೊಲೀಸರಿಂದ ಆಘಾತಕಾರಿ ಸಂಗತಿ ಬಹಿರಂಗ.!
ಶಾಲಾ ಆಡಳಿತ ಮಂಡಳಿ ತನ್ನ ಮೊಬೈಲ್ ಕಿತ್ತುಕೊಂಡು ವಶಪಡಿಸಿಕೊಂಡ ಕಾರಣಕ್ಕೆ ಆರೋಪಿ ವಿದ್ಯಾರ್ಥಿನಿ ಬೆಂಕಿ ಹಚ್ಚಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಸ್ತವವಾಗಿ, ವಿದ್ಯಾರ್ಥಿನಿಯು ವಯಸ್ಸಾದ ವ್ಯಕ್ತಿಯ ಸಂಪರ್ಕದಲ್ಲಿದ್ದಳು ಎಂದು ಶಾಲೆಯ ಆಡಳಿತ ಮಂಡಳಿಗೆ ತಿಳಿದು ಬಂದಿದ್ದು, ಇದಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಆರೋಪಿ ಬಾಲಕಿಗೆ ಸುಮಾರು 14 ವರ್ಷ ವಯಸ್ಸಾಗಿದ್ದು, ಆಕೆಯ ಫೋನ್ ಕಿತ್ತುಕೊಂಡಾಗ ಬಾಲಕಿಯರ ಹಾಸ್ಟೆಲ್‌ಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಳು ಎನ್ನಲಾಗ್ತಿದೆ.
ಎಚ್ಚರ ; ಮಾನಸಿಕ ಆರೋಗ್ಯದ ಮೇಲೆ ‘ಬಿಸಿ ಗಾಳಿ’ ಪರಿಣಾಮ, ಹೆಚ್ಚುತ್ತಿವೆ ‘ಆತ್ಮಹತ್ಯೆ’ ಪ್ರಕರಣಗಳು