SHOCKING : ನೀರಿನ ಮೋಟಾರ್ ಆನ್ ಮಾಡುವಾಗ ಇರಲಿ ಎಚ್ಚರ : ಬೀದರ್ ನಲ್ಲಿ ವಿದ್ಯುತ್ ತಗುಲಿ ಯುವಕ ಸಾವು
ಬೀದರ್ : ಮನೆಯಲ್ಲಿ ನೀರಿನ ಮೋಟಾರ್ ಆನ್ ಮಾಡುವ ವೇಳೆ ವಿದ್ಯುತ್ ತಗುಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರ ಎಂಬ ಗ್ರಾಮದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.. ಮೃತ ಯುವಕನನ್ನು ನಾರಾಯಣಪುರ ಗ್ರಾಮದ ಕಲ್ಲಪ್ಪ ಬಸವರಾಜ ಮೇತ್ರೆ (30) ಎಂದು ತಿಳಿದುಬಂದಿದೆ. ಕಲ್ಲಪ್ಪ ಮನೆಯಲ್ಲಿನ ನೀರಿನ ಮೋಟರ್ ಆನ್ ಮಾಡಲು ತೆರಳಿದ ಸಂದರ್ಭದಲ್ಲಿ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Copy and paste this URL into your WordPress site to embed
Copy and paste this code into your site to embed