‘ಆಲಿಯಾ ಭಟ್’ ಪಾತ್ರದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸ್ಟಾರ್ ನಿರ್ದೇಶಕ ‘ರಾಜಮೌಳಿ’….! – Kannada News Now


Film Other Film

‘ಆಲಿಯಾ ಭಟ್’ ಪಾತ್ರದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸ್ಟಾರ್ ನಿರ್ದೇಶಕ ‘ರಾಜಮೌಳಿ’….!

ಸಿನಿಮಾ ಡೆಸ್ಕ್ :  ಬಾಹುಬಲಿ ಸಿನಿಮಾದ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ  ಸದ್ಯ ಬಿಗ್ ಪ್ರಾಜೆಕ್ಟ್ ಆರ್ ಆರ್ ಆರ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ಚಿತ್ರೀಕರಣದ ಕೆಲಸ ಅರ್ಧಕ್ಕೆ ನಿಂತಿದೆ. ಈ ನಡುವೆ ಆಲಿಯಾ ಭಟ್ ರಾಜಮೌಳಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ.

ಯೆಸ್, ಅದೇನಪ್ಪ ಅಂದ್ರೆ ರಾಮ್‌ ಚರಣ್‌ ಮತ್ತು ಜೂ.ಎನ್‌ಟಿಆರ್ ನಾಯಕತ್ವದ ‘ಆರ್‌ಆರ್‌ಆರ್‌’ ಚಿತ್ರದಲ್ಲಿ ಆಲಿಯಾ ಭಟ್‌ ನಟಿಸಲಿದ್ದಾರೆ ಎಂಬ ವಿಚಾರ ಎಲ್ಲರಲ್ಲಿ ಕುತೂಹಲ ಮೂಡಿಸಿತ್ತು. . ಇನ್ನು, ರಾಮ್‌ ಚರಣ್‌ಗೆ ಆಲಿಯಾ ಭಟ್ ನಾಯಕಿ  ಎನ್ನಲಾಗಿತ್ತು. ಜೊತೆಗೆ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆ ಎಂಬ ಸುದ್ದಿ ಕೂಡ ಹರಡಿತ್ತು.

ಆದರೆ ಈ ವಿಚಾರದ ಕುರಿತು ರಾಜಮೌಳಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಸಿನಿಮಾದಲ್ಲಿ ಯಾವುದೇ ತ್ರಿಕೋನ ಪ್ರೇಮಕಥೆ ಇಲ್ಲ. ಅಲ್ಲದೆ, ಇಬ್ಬರು ಹೀರೋಗಳಿಗೂ ಆಲಿಯಾ ಭಟ್ ಜೋಡಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ರಾಜಮೌಳಿ ಹೇಳಿದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಇನ್ನೂ, ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಬಹಳ ಕ್ಯುರಿಯಾಸಿಟಿ ಇದ್ದು, ಸಿನಿಮಾ ಬಿಡುಗಡೆ ದಿನಾಂಕಕ್ಕಾಗಿ ಎದುರು ನೋಡುತ್ತಿದ್ದಾರೆ.