ಶಿವಮೊಗ್ಗ: ಆಡಂಬರದ ಪೂಜೆಯಿಂದ ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ- ಪಂಡಿತ ಅನಂತ ಪದ್ಮನಾಭಾಚಾರ್

ಶಿವಮೊಗ್ಗ: ಆಡಂಬರದ ಪೂಜೆಯಿಂದ ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ. ನಿರ್ಮಲವಾದ ಭಕ್ತಿಯೇ ಪ್ರಧಾನವಾದದ್ದು ಎಂದು ಪಂಡಿತ ಅನಂತ ಪದ್ಮನಾಭಾಚಾರ್ ಮೈಸೂರು ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದ ಮಧ್ವ ಮಂದಿರದಲ್ಲಿ 3 ದಿನಗಳ ಕಾಲ ಆಯೋಜಿಸಿದ್ದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಮಂಗಳವಾರ ಸಮಾಜದಿಂದ ಕೊಡಮಾಡುವ ʼಅನಂತ ಸೇವಾ ಪುರಸ್ಕಾರʼವನ್ನು ಆಯನೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಪ್ರಮೋದಾಚಾರ್‌ ಕಲ್ಲಾಪುರ ಅವರಿಗೆ ಪ್ರಧಾನ ಮಾಡಿ ಮಾತನಾಡಿದರು. ಸೇವೆ ನಮ್ಮ ಅಹಂಕಾರವೂ ಆಗಬಾರದು, ಆಡಂಬರವೂ ಆಗಬಾರದು. ನಮ್ಮ ಅಂತರಾಳದಲ್ಲಿರುವ ಪರಮಾತ್ಮನಿಗೆ ಎಲ್ಲವನ್ನೂ … Continue reading ಶಿವಮೊಗ್ಗ: ಆಡಂಬರದ ಪೂಜೆಯಿಂದ ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ- ಪಂಡಿತ ಅನಂತ ಪದ್ಮನಾಭಾಚಾರ್