ಶಿವಮೊಗ್ಗ : ಶ್ವಾನ ಪ್ರದರ್ಶನದ ವೇಳೆಯಲ್ಲಿ ಪ್ರೇಕ್ಷಕದ ಮೇಲೆ ರಾಟ್ ವೀಲರ್ ಎಂಬ ಸ್ಥಳೀಯ ನಾಯಿಯು ಮನಸೋ ಇಚ್ಛೆ ದಾಳಿ ನಡೆಸಿರುವ ಘಟನೆಯು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಈ ವೇಳೆ ಗಂಭೀರವಾಗಿ ಗಾಯ ಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ವಾನ ಪ್ರದರ್ಶನ ವೇಳೆ ಪ್ರೇಕ್ಷಕರ ಮೇಲೆ ನಾಯಿ ದಾಳಿ ನಡೆಸಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದ ಘಟನೆ ಯಾಗಿದೆ. ರಾಟ್ ವಿಲರ್ ಜಾತಿಯ ನಾಯಿಯಿಂದ ಪ್ರೇಕ್ಷಕ ಶರತ್ ಎನ್ನುವವರ ಮೇಲೆ ಮನಸೊ ಇಚ್ಛೆ ದಾಳಿ ಮಾಡಿದೆ.

ರಾಟ್ ವೀಲರ್ ನಾಯಿ ಪ್ರದರ್ಶನಕ್ಕೆ ಬಂದ ಪ್ರೇಕ್ಷಕ ಶರತ್ ಗೆ ಕೂಡ ಗಂಭೀರವಾದಂತಹ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಗಾಯಾಳು ಶರತ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೆ ವೇಳೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಆಯೋಜಕರು ಹಿಂದೇಟು ಹಾಕಿದಾಗ ಶರತ್ ಆಯೋಜಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಘಟನೆ ನಡೆದ ನಂತರ ಆಯೋಜಕರ ವಿರುದ್ಧ ಗಾಯಾಳು ಶರತ್ ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 11 ಬಾರಿ ದಾಳಿ ನಡೆಸಿದ ನಾಯಿಯನ್ನು ಶ್ವಾನ ಪ್ರದರ್ಶನಕ್ಕೆ ಕರೆದುಕೊಂಡು ಬಂದಿದ್ದು ದೊಡ್ಡ ತಪ್ಪಾಗಿದ್ದು ನನ್ನ ಮೇಲೆ ನಾಯಿ ದಾಳಿ ಮಾಡಿದ ನಂತರ ಸ್ಥಳದಲ್ಲಿ ಯಾವುದೇ ರೀತಿಯಾದ ವೈದ್ಯಕೀಯ ವ್ಯವಸ್ಥೆ ಹಾಗೂ ಅಂಬುಲೆನ್ಸ್ ಕೂಡ ಇರಲಿಲ್ಲ. ಹೀಗಾಗಿ ನಾನು ಆಸ್ಪತ್ರೆಗೆ ದಾಖಲಾಗಲು ತಡವಾಯಿತು ಎಂದು ಆಯೋಜಕರು ವಿರುದ್ಧ ಗಾಯಾಳು ಶರತ್ ಆಕ್ರೋಶ ಹೊರಹಾಕಿದ್ದಾರೆ.

Share.
Exit mobile version