ಶಿವಮೊಗ್ಗ: ಯಕ್ಷಗಾನ ಪ್ರಿಯರಿಗೆ ಸಂತಸದ ಸುದ್ದಿ ಎನ್ನುವಂತೆ ನಾಳೆ ಸಂಜೆ 7 ಗಂಟೆಗೆ ಸಾಗರದ ಗಾಂಧಿ ಮೈದಾನದಲ್ಲಿ ಮಾಗಧ ಕೃಷ್ಣ ಅಭಿಮನ್ಯು ಎಂಬಂತ ಪೌರಾಣಿಕ ಯಕ್ಷಗಾನ ಆಯೋಜಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಸಂಘಟಕರಾದಂತ ಸುದ್ದಿಸಾಗರ ಉಮೇಶ್ ಮೊಗವೀರ ಅವರು, ನಾಳೆ ಮೆಕ್ಕೆಕಟ್ಟು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಮಾಗಧ ಕೃಷ್ಣ ಅಭಿಮನ್ಯು ಎಂಬ ಪೌರಾಣಿಕ ಯಕ್ಷಗಾನವನ್ನು ಸಾಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಳೆ ಸಂಜೆ 7 ಗಂಟೆಯಿಂದ ಯಕ್ಷಗಾನ ಪ್ರಾರಂಭವಾಗಲಿದೆ. ಈ ಯಕ್ಷಗಾನದಲ್ಲಿ ಅತಿಥಿ ಕಲಾವಿದರಾಗಿ ಗಾನ ಕೋಗಿಲಿ ಸುಬ್ರಹ್ಮಣ್ಯ ಧಾರೇಶ್ವರ, ಗೋಪಾಲ ಆಚಾರ್ಯ ತೀರ್ಥಹಳ್ಳಿ, ಮಲೆನಾಡಿನ ಕುವರ ಭಾಸ್ಕರ್ ತುಂಬ್ರಿಯವರು ಭಾಗಿಯಾಗಲಿದ್ದಾರೆ. ಇವರಿಗೆ ಸನ್ಮಾನ ಕಾರ್ಯಕ್ರಮ ಕೂಡ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಯಕ್ಷಗಾನ ಕಾರ್ಯಕ್ರಮಕ್ಕೆ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಮೇಶ್ ಮೊಗವೀರ -8317369016, ನಾಗರಾಜ್ ಹೊಳೆಕೊಪ್ಪ -9449147023 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಗಮನಿಸಿ: ನಾಳೆಯಿಂದ ಫೆ.23ರವರೆಗೆ ‘ಡಿಸಿಎಂ ಡಿ.ಕೆ ಶಿವಕುಮಾರ್’ ಸಾರ್ವಜನಿಕರ ಸಂದರ್ಶನಕ್ಕೆ ಅಲಭ್ಯ
ರಾಜ್ಯ ‘ಗುತ್ತಿಗೆ, ಹೊರಗುತ್ತಿಗೆ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ಸಮಾನ ಕೆಲಸಕ್ಕೆ, ‘ಸಮಾನ ವೇತನ’ ಜಾರಿ