ಮಹಾರಾಷ್ಟ್ರ: ತೀವ್ರ ಕುತೂಹಲದ ಘಟ್ಟವನ್ನು ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ತಲುಪಿದೆ. ಸಿಎಂ ಉದ್ಧವ್ ಠಾಕ್ರೆ ವಿರುದ್ಧವೇ ಬಂಡಾಯವೆದ್ದಂತ ಏಕನಾಥ್ ಶಿಂಧೆ ಸೇರಿದಂತೆ 12 ಬಂಡಾಯ ಶಾಸಕರನ್ನು ಶಿವಸೇನೆ ಅನರ್ಹಗೊಳಿಸಿದೆ.
ಏಕನಾಥ್ ಶಿಂಧೆ ನೇತೃತ್ವದ ಬಂಡಾಯದ ಹಿನ್ನೆಲೆಯಲ್ಲಿ ಶಿವಸೇನೆ 12 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಹೀಗಾಗಿ 40 ಮಂದಿ ಬಂಡಾಯ ಶಾಸಕರಲ್ಲಿ, 12 ಶಾಸಕರನ್ನು ಶಿವಸೇನೆಯಿಂದ ಉಚ್ಛಾಟನೆಗೊಳಿಸಲಾಗಿದೆ. ಈ ಮೂಲಕ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸಿದೆ ಎಂಬುದಾಗಿ ತಿಳಿದು ಬಂದಿದೆ. ಈ ನಡುವೆಯೂ ಹೋಟೆಲ್ ರಾಜಕೀಯ ಹೈಡ್ರಾಮ ಮುಂದುವರೆದಿದೆ.