ಸುಭಾಷಿತ :

Monday, February 17 , 2020 5:11 AM

ನೀವಂದುಕೊಂಡಂತಿಲ್ಲ ‘ಶೈನ್ ಶೆಟ್ಟಿ’ : ‘ಬಿಗ್ ಬಾಸ್’ ಸ್ಪರ್ಧಿಯ ಅಸಲಿ ಗುಣ ಬಿಚ್ಚಿಟ್ಟ ನಟಿ..!


Wednesday, January 22nd, 2020 7:42 pm

ಸಿನಿಮಾ ಡೆಸ್ಕ್ : ಬಿಗ್ ಬಾಸ್ ಮನೆಯ ಜನಪ್ರಿಯ ಸ್ಪರ್ಧಿ ಶೈನ್ ಶೆಟ್ಟಿ ತಮ್ಮದೇ ಆದ ವ್ಯಕ್ತಿತ್ವದಿಂದ ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ. ಅಲ್ಲದೇ. ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದ್ದಾರೆ.

ಶೈನ್ ಶೆಟ್ಟಿ ಅವರು ಈಗಾಗಲೇ ಮನರಂಜನೆ, ಆಟದ ವಿಚಾರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಈ ನಡುವೆ ಕನ್ನಡದ ಕಿರುತೆರೆ ನಟಿಯರಿಬ್ಬರು ಶೈನ್ ಶೆಟ್ಟಿಯ ಅಸಲಿ ಗುಣ ಬಿಚ್ಚಿಟ್ಟಿದ್ದಾರೆ…

ಹೌದು, ಶೈನ್ ಶೆಟ್ಟಿ ಬಗ್ಗೆ ಕನ್ನಡದ ನಟಿ ನೀತು ಮಾತನಾಡಿದ್ದಾರೆ, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೀತು ಶೈನ್ ಶೆಟ್ಟಿ ಸಿನಿಮಾದ ಪಾತ್ರಕ್ಕೋಸ್ಕರ ಉದ್ದುದ್ದ ಗಡ್ಡ ಬಿಟ್ಟಿದ್ದರು. ಅವರಿಗೆ ಆ ಸಿನಿಮಾ ಬಗ್ಗೆ ತುಂಬ ಆಸೆ, ಒಲವು ಇತ್ತು. ಆದರೆ ಆ ಸಿನಿಮಾ ಕನಸು ನೆರವೇರಲಿಲ್ಲ ಎಂದರು.  ಶೈನ್ ಶೆಟ್ಟಿ. ಎಂದು ಅಂದುಕೊಳ್ಳದೆ ಗಲ್ಲಿ ಕಿಚನ್ ನಡೆಸಿದ್ದರು. ಅಲ್ಲದೇ ಕಾರ್ ಸರ್ವಿಸ್ ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರು ತುಂಬ ಚೆನ್ನಾಗಿ ಆಟ ಆಡಿದ್ದಾರೆ. ಎಲ್ಲರಿಗೂ ಇಷ್ಟವಾಗುವ ವ್ಯಕ್ತಿತ್ವ ಅವರದ್ದು. ಬದುಕಿನಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ” ಎಂದು ನಟಿ ನೀತು ಹೇಳಿದ್ದಾರೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions