ಶಿವಮೊಗ್ಗ: ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ತೆರಳಿದಂತ ಯುವಕನೊಬ್ಬ, ಆಜಾನ್ ಕೂಗಿರುವಂತ ಘಟನೆ ನಡೆದಿದೆ. ಅಲ್ಲದೇ ಆಜಾನ್ ಕೂಗಿದಂತ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ರಾಗಿಗುಡ್ಡದ ನಿವಾಸಿ ಮೌಸೀನ್ ಎಂಬಾತ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಜಾನ್ ಕುರಿತ ಹೇಳಿಕೆ ವಿರೋಧಿಸಿ ಡಿಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದನು. ಅಲ್ಲದೇ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆಯೇ ಆಜಾನ್ ಕೂಗಿದ್ದನು.
ಮೌಸೀನ್ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಆಜಾನ್ ಕೂಗಿದಂತ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆತನನ್ನು ಜಯನಗರ ಪೊಲೀಸರು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಜಯನಗರ ಠಾಣೆಗೆ ತೆರಳಿದ್ದಂತ ಆತನ ಪರ ವಕೀಲರು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿದ್ದರು. ಈ ಬಳಿಕ ಮಾತನಾಡಿದಂತ ಮೌಸೀನ್ ಪರ ವಕೀಲರು, ಆತನಿಗೆ ಶಾಂತಿಯ ವಾತಾವರಣ ಕದಡಂತೆ ಬುದ್ಧಿ ಹೇಳುತ್ತೇನೆ. ಮುಂದೆ ಹೀಗೆ ಮಾಡದಂತೆ ಎಚ್ಚರಿಸೋದಾಗಿ ತಿಳಿಸಿದರು.
ಅಂದಹಾಗೇ ಕೆಲ ದಿನಗಳ ಹಿಂದೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡುತ್ತಿದ್ದ ವೇಳೆಯಲ್ಲೇ ಆಜಾನ್ ಕೂಗಲಾಗಿತ್ತು. ನೋಡಿ ಅಲ್ಲಾನಿಗೆ ಕಿವಿ ಕೇಳಿಸೋದಿಲ್ಲವೇನೋ ಅದಕ್ಕೆ ಹೀಗೆ ಧ್ವನಿ ವರ್ಧಕ ಬಳಸಿ ಆಜಾನ್ ಕೂಗುತ್ತಾರೆ ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿಯೇ ಇಂದು ಡಿಸಿ ಕಚೇರಿಯ ಮುಂದೆ ಆಜಾನ್ ಕೂಗಿದಂತ ಯುವಕನನ್ನು ಬಂಧಿಸಿ, ಜಾಮೀನು ಮೇಲೆ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
BREAKING NEWS : ತಜಕಿಸ್ತಾನದಲ್ಲಿ 4.4 ತೀವ್ರತೆಯ ಭೂಕಂಪ | Earthquake in Tajikistan
BIGG NEWS : ಐಸಿಸಿ ಬಂಧನ ವಾರಂಟ್ ಬಳಿಕ ರಷ್ಯಾ ಆಕ್ರಮಿತ ಮಾರಿಯುಪೋಲ್, ಕ್ರೈಮಿಯಾಗೆ ‘ಪುಟಿನ್’ ಭೇಟಿ