ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಾಳೆಯಿಂದ ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ, ಫೆ.8ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮೆಸ್ಕಾಂನ ( MESCOM ) ಸೊರಬ ತಾಲೂಕು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮಾಹಿತಿ ನೀಡಿದ್ದು, ದಿನಾಂಕ 06-02-2023 ರಿಂದ 08-02-2023ರವರೆದೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ನಡೆಯುವ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದಿದ್ದಾರೆ.
ದಿನಾಂಕ 06-02-2023 ರಿಂದ 08-02-2023ರವರೆಗೆ ಜಂಗಿನಕೊಪ್ಪ, ಹಳೇ ಸೊರಬ, ಗೌರಿಕೆರೆಮಠ, ಚಿತ್ರಟ್ಟೆಹಳ್ಳಿ, ಓಟೂರು, ಬಿಳವಗೋಡು, ಕುದರೇಗಣಿ, ತ್ಯಾವಗೋಡು, ಸಾರೇಕೊಪ್ಪ, ಸಾರೇಮರೂರು, ಕಲ್ಲಂಬಿ, ಗುಡವಿ, ಬಳ್ಳಿಬೈಲು, ದುಗ್ಗಿಹೊಸೂರು, ಹುಲೇಮರಡಿ, ಕಂತನಹಳ್ಳಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
BIGG NEWS: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 20 ಸ್ಥಾನ ಕೂಡ ಗೆಲ್ಲಲ್ಲ: ನಳಿನ್ ಕುಮಾರ್ ಕಟೀಲ್