ಶಿವಮೊಗ್ಗ : ಜೂನ್ 03 ರಂದು ಮಾಡೆಲ್ ಸಬ್ ಡಿವಿಷನ್ ಯೋಜನೆಯಡಿ ವಿದ್ಯುತ್ ಕೇಬಲ್‍ಗಳ ಅಳವಡಿಕೆ ಕಾರ್ಯ ಇರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ರಾಜೇಂದ್ರನಗರ, ರವೀಂದ್ರನಗರ, ಜಯನಗರ, ಬಸವನಗುಡಿ, ಸವಳಂಗ ಮುಖ್ಯ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿವಿಧ ಯೋಜನೆಗಳಡಿ ವಿಕಲಚೇತನರಿಂದ ಅರ್ಜಿ ಆಹ್ವಾನ
ಶಿವಮೊಗ್ಗ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ 2022-23 ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾಧನೆ ಸಲಕರಣೆ, ಆಧಾರ ಯೋಜನೆ, ವೈದ್ಯಕೀಯ ಪರಿಹಾರ ನಿಧಿ, ವಿವಾಹ ಪ್ರೋತ್ಸಾಹಧನ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ಸಾಧನೆ ಪ್ರತಿಭೆ, ಯಂತ್ರಚಾಲಿತ ತ್ರಿಚಕ್ರ ವಾಹನ, ಟಾಕಿಂಗ್ ಲ್ಯಾಪ್‍ಟಾಪ್, ವಿದ್ಯಾರ್ಥಿ ಪ್ರೋತ್ಸಾಹಧನ, ವಿದ್ಯಾರ್ಥಿ ಶುಲ್ಕ ಮರುಪಾವತಿ, ಹೊಲಿಗೆಯಂತ್ರ, ಬ್ರೈಲ್ ಕಿಟ್ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
BIG NEWS: ‘ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ್’ ಹೆಸರಿನಲ್ಲಿ ವಂಚನೆ, ದೂರು ದಾಖಲು
ಅರ್ಜಿ ಸಲ್ಲಿಸಲು ಜೂನ್ 30 ಕಡೆಯ ದಿನವಾಗಿದ್ದು ಅರ್ಜಿ ನಮೂನೆಯನ್ನು ಆಯಾ ತಾಲ್ಲೂಕಿನ ಎಂ.ಆರ್.ಡಬ್ಲ್ಯುಗಳಿಂದ ಪಡೆದು ಭರ್ತಿ ಮಾಡಿ ಎಲ್ಲಾ ದಾಖಲಾತಿಗಳನ್ನು ಲಗತ್ತಿಸಿ ಆಯಾ ತಾಲ್ಲೂಕಿನ ಗ್ರಾ.ಪಂ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು(ವಿಆರ್‍ಡಬ್ಲ್ಯು) ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು(ಎಂಆರ್‍ಡಬ್ಲ್ಯು)ಗಳಿಗೆ ನೀಡಲು ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕಿನ ಎಂಆರ್‍ಡಬ್ಲ್ಯುಗಳ ಮೊಬೈಳ್ ಸಂಖ್ಯೆ ಶಿವಮೊಗ್ಗ 9980150110, ಭದ್ರಾವತಿ 7899137243, ಶಿಕಾರಿಪುರ 9741161346, ತೀರ್ಥಹಳ್ಳಿ 9480767638, ಸಾಗರ 9535247757, ಸೊರಬ 9110493122, ಹೊಸನಗರ 9731922693 ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.