ಶಿವಮೊಗ್ಗ : ಸರ್ಕಾರದ ಸುತ್ತೋಲೆ ಮತ್ತು ಪೌರಾಡಳಿತ ನಿರ್ದೇಶನಾಲಯದ ಪತ್ರದನ್ವಯ ನವೆಂಬರ್ 25 ರ ಸೈಂಟ್ ಟಿ.ಎಲ್. ವಾಸ್‍ವಾನಿ ಜನ್ಮ ದಿನದಂದು ನಗರದಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ( Meat Sale ) ಮಾಡುವುದನ್ನು ನಿಷೇಧಿಸಲಾಗಿದೆ.

Werewolf Syndrome: ‘ವೆರ್‌ವುಲ್ಫ್ ಸಿಂಡ್ರೋಮ್’ನಿಂದ ಬಳಲುತ್ತಿದ್ದಾನೆ ಈ ಯುವಕ: ಇದಕ್ಕೆ ಕಾರಣ, ಲಕ್ಷಣವೇನು? ತಿಳಿಯೋಣ ಬನ್ನಿ

ಅಂದು ಕಡ್ಡಾಯವಾಗಿ ಮಾಂಸದ ಉದ್ದಿಮೆಯನ್ನು ಮುಚ್ಚುವುದು ಹಾಗೂ ಮಾಂಸ ಮಾರಾಟ ನಿಲ್ಲಿಸುವುದು. ಈ ಆದೇಶ ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಕಾನೂನುಬದ್ದ ದತ್ತು ಪ್ರಕ್ರಿಯೆ-ಕಾರಾ ಮಾರ್ಗಸೂಚಿ ಕುರಿತು ತರಬೇತಿ

ವೈದ್ಯಕೀಯ ವಿದ್ಯಾರ್ಥಿಗಳು, ಓಬಿಜಿ ವಿಭಾಗದ ವೈದ್ಯರು ಮತ್ತು ಇತರೆ ಸಿಬ್ಬಂದಿಗಳಿಗೆ ನ.24 ರ ಸಂಜೆ 4 ಗಂಟೆಗೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅನಾಟಮಿ ಲೆಕ್ಚರ್ ಹಾಲ್‍ನಲ್ಲಿ ‘ಬಾಲ ನ್ಯಾಯ ಕಾಯ್ದೆ’ಯಡಿ ಬರುವ ಕಾನೂನು ಬದ್ದ ದತ್ತು ಪ್ರಕ್ರಿಯೆ ಹಾಗೂ ಕಾರಾ ಮಾರ್ಗಸೂಚಿ ಕುರಿತು ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

BIGG NEWS : ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್‌ : ʼಕೇಂದ್ರ, ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ʼ: ಸಚಿವ ಕೆ. ಗೋಪಾಲಯ್ಯ

ಈ ಕಾರ್ಯಕ್ರಮವನ್ನು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Share.
Exit mobile version