ಹೊಸಪೇಟೆ: ಇಲ್ಲಿನ ಮೈಲಾರ ಲಿಂಗದಲ್ಲಿ ನಡೆಯುವಂತ ಕಾರ್ಣೀಕ ನುಡಿ ಜಗತ್ ಪ್ರಸಿದ್ಧಿಯಾದಂತದ್ದು. ಇಂದು ನಡೆದಂತ ಕಾರ್ಣೀಕದಲ್ಲಿ ಅಂಬಲಿ ಹಳಸೀತು, ಕಂಬಳಿ ಬೀಸಿತಲೆ ಪರಾಕ್ ಎಂಬುದಾಗಿ ಗೊರವಯ್ಯ ಕಾರ್ಣಿಕ ನುಡಿ ನುಡಿದ್ದಿದ್ದು, ಈ ರಾಜ್ಯ, ದೇಶವನ್ನು ನಿಷ್ಠೆ, ಪ್ರಾಮಾಣಿಕ ವ್ಯಕ್ತಿ ಆಳುತ್ತಾನೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ರಾಜ್ಯ, ರಾಷ್ಟ್ರವನ್ನು ಪ್ರಾಮಾಣಿಕ, ನಿಷ್ಠೆಯಿಂದ ಇರುವ ವ್ಯಕ್ತಿ ಆಳುತ್ತಾನೆ . ಪರೋಕ್ಷವಾಗಿ ಕುರುಬ ಸಮುದಾಯದ ವ್ಯಕ್ತಿಯೇ ರಾಜ್ಯವನ್ನಾಳುತ್ತಾರೆ ಎಂದು ಹೇಳಿದ್ದರಿಂದ ರಾಜಕೀಯ ವಲಯದಲ್ಲಿ ಕಾರ್ಣಿಕ ನುಡಿ ಬಹಳ ಕುತೂಹಲ ಮೂಡಿಸಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿರುವಂತ ಮೈಲಾರ ಕ್ಷೇತ್ರದಲ್ಲಿ ಇಂದು ವರ್ಷದ ಕಾರ್ಣಿಕೋತ್ಸವ ನಡೆಯಿತು. ಈ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪ ಕಾರ್ಣೀಕ ಕಂಬವನ್ನೇರಿ ಅಂಬಲಿ ಹಳಸೀತು, ಕಂಬಳಿ ಬೀಸಿತಲೆ ಪರಾಕ್ ಎಂಬುದಾಗಿ ನುಡಿದ್ದಾರೆ.ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನುಡಿದಂತ ಈ ಕಾರ್ಣಿಕ ನುಡಿಯನ್ನು ಮೈಲಾರ ಲಿಂಗೇಶ್ವರ ದೇವಾಲಯದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಿಸಿದ್ದು, ಈ ರಾಜ್ಯ, ರಾಷ್ಟ್ರವನ್ನು ಪ್ರಾಮಾಣಿಕ, ನಿಷ್ಠೆಯಿಂದ ಇರುವ ವ್ಯಕ್ತಿ ಆಳುತ್ತಾನೆ ಎಂದರು. ಮಳೆ, ಬೆಳೆ ಹೆಚ್ಚಾಗಿ, ಸಮೃದ್ಧಿಯಾಗಲಿದೆ. ಈ ಬಾರಿ ರೈತರಿಗೆ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಮಳೆಯೂ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ ಎಂಬುದಾಗಿಯೂ ವಿಶ್ಲೇಷಿಸಿದ್ದಾರೆ.
ಸರಣಿ ‘ಟ್ವಿಟ್’ನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಸಚಿವ ಸುಧಾಕರ್ ತರಾಟೆ
BREAKING NEWS : ‘ಅಂಬಿ’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಮಾರ್ಚ್ ನಲ್ಲಿ ನಟ ‘ಅಂಬರೀಷ್’ ಸ್ಮಾರಕ ಉದ್ಘಾಟನೆ
ಜೆಡಿಎಸ್, ಭೋಜೇಗೌಡರಿಂದ ದಾರಿ ತಪ್ಪಿಸುವ ಚುನಾವಣಾ ಸ್ಟಂಟ್- ಛಲವಾದಿ ನಾರಾಯಣಸ್ವಾಮಿ ಆಕ್ಷೇಪ