ಮಂಗಳೂರು : ಕುಡುಕನೊಬ್ಬನಿಗೆ ರಸ್ತೆಯಲ್ಲಿ ಹತ್ತು ಲಕ್ಷ ಹಣ ಸಿಕ್ಕಿದ ಘಟನೆ ಮಂಗಳೂರಿನ ಪಂಪ್ ವೆಲ್ ಬಳಿ ನಡೆದಿತ್ತು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಸ್ಷಷ್ಟನೆ ನೀಡಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿರುವ ಶಶಿಕುಮಾರ್ ಕುಡುಕನಿಗೆ 10 ಲಕ್ಷ ಸಿಕ್ಕಿಲ್ಲ, ಆತನಿಗೆ ಸಿಕ್ಕಿದ್ದು ಬರೀ ಮೂರೂವರೆ ಲಕ್ಷ ಎಂದು ಹೇಳಿದ್ದಾರೆ. ಹಣ ಕಳೆದುಕೊಂಡವರು ಠಾಣೆಗೆ ಬಂದು ಸಾಬೀತು ಮಾಡಬೇಕು ಎಂದು ಹೇಳಿದರು.

ನ.26 ರಂದು ಬಾಕ್ಸ್ ಮತ್ತು ಕವರ್ ನಲ್ಲಿ ಶಿವರಾಜ್ ಗೆ ಹಣ ಸಿಕ್ಕಿದೆ. ಸ್ಪಷ್ಟವಾಗಿ ಅದರಲ್ಲಿ ಎಷ್ಟು ಹಣ ಇದೆ ಎಂಬುದು ಆತನಿಗೆ ಗೊತ್ತಿಲ್ಲ, ಹಣ ಸಿಕ್ಕಿದ ವೇಳೆ ಶಿವರಾಮ್, ತುಕರಾಮ್ ಎಂಬುವವರಿಗೆ 50 ಸಾವಿರ ಆರು ಕಟ್ಟು ಹಣ ನೀಡಿದ್ದಾನೆ, ಅಂದರೆ ತುಕಾರಾಮ್ ಗೆ ಮೂರು ಲಕ್ಷ ಹಣ ನೀಡಿದ್ದಾನೆ. ಆ ಹಣದಲ್ಲಿ ತುಕಾರಾಮ್ 500 ರೂ ಹಣ ಮಾತ್ರ ಉಪಯೋಗಿಸಿದ್ದಾನೆ ಎಂದು ಹೇಳಿದರು. ಘಟನೆ ಕುರಿತು ಸಿಸಿಟಿವಿ ದೃಶ್ಯವನ್ನು ಪರಿಶೀಲನೆ ನಡೆಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಘಟನೆ ಹಿನ್ನೆಲೆ
ನ.27 ರಂದು ಮಂಗಳೂರಿನ ಪಂಪ್ ವೆಲ್ ಬಳಿ ಘಟನೆ ನಡೆದಿದ್ದು, ಮದ್ಯ ವ್ಯಸನಿಯಾಗಿದ್ದ ಶಿವರಾಜ್ ಗೆ ರಸ್ತೆಯಲ್ಲಿ 10 ಲಕ್ಷ ಇರುವ ಹಣದ ಕಂತೆ ಸಿಕ್ಕಿದೆ. ನಂತರ ಆತ ಅದರಲ್ಲಿ ಒಂದು ನೋಟು ತೆಗೆದು ಮತ್ತೆ ಬಾರ್ ಗೆ ಕುಡಿಯಲು ಹೋಗಿದ್ದಾನೆ, ಅಲ್ಲದೇ ಜೊತೆಗಿದ್ದವನಿಗೂ ಒಂದು ನೋಟು ಕೊಟ್ಟಿದ್ದಾನೆ. ಅದು ಹೇಗೂ ಈ ವಿಷಯ ಪೊಲೀಸರಿಗೆ ತಿಳಿದಿದ್ದು, ಪೊಲೀಸರು ಬಂದು ಶಿವರಾಜ್ ನನ್ನು ಹಣದ ಸಮೇತ ಕರೆದುಕೊಂಡು ಹೋಗಿದ್ದಾರೆ, ಆದರೆ ಯಾವುದೇ ಪ್ರಕರಣ ದಾಖಲಿಸಲದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿತ್ತು, , ಅಲ್ಲದೇ ಹಣದ ವಾರಸುದಾರ ಕೂಡ ಈ ಬಗ್ಗೆ ದೂರು ನೀಡಿಲ್ಲ ಎಂಬ ಸುದ್ದಿ ಹರಿದಾಡಿತ್ತು.

ನಾವು ಹಣವನ್ನು ವಾರಸುದಾರರಿಗೆ ಕೊಟ್ಟಿದ್ದೇವೆ ಎಂದು ಪೊಲೀಸರು ಹೇಳುತ್ತಿದ್ದರೆ, ಇನ್ನೂ ಶಿವರಾಜ್ ನಾನು ಅಲ್ಲೇ ಇದ್ದೆ, ಪೊಲೀಸರು ಹಣ ಕೊಟ್ಟ ಬಗ್ಗೆ ನನಗೆ ಗೊತ್ತಾಗಿಲ್ಲ ಎಂದು ಹೇಳ್ತಿದ್ದಾನೆ. ಘಟನೆ ಹಿಂದೆ ಹಲವು ಅನುಮಾನಕ್ಕೆ ಕಾರಣವಾಗಿತ್ತು.

Share.
Exit mobile version