ಸುಭಾಷಿತ :

Wednesday, April 8 , 2020 7:21 AM

ಜೆರ್ಸಿ ಶೂಟಿಂಗ್ ವೇಳೆ ಮುಖಕ್ಕೆ ಚೆಂಡು ಬಡಿದು ಶಾಹಿದ್ ಕಪೂರ್ ಗಂಭೀರ ಗಾಯ 


Sunday, January 12th, 2020 10:01 am

ಮುಂಬೈ:  ಬಾಲಿವುಡ್ ನಲ್ಲಿ ಹಿಟ್ ಚಿತ್ರಗಳನ್ನು ನೀಡುತ್ತಿರುವ ನಟ ಶಾಹಿದ್ ಕಪೂರ್ ಸದ್ಯ ಜೆರ್ಸಿ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇದೀಗ  ಚಿತ್ರದ ಶೂಟಿಂಗ್ ವೇಳೆ ಶಾಹಿದ್  ತುಟಿಗೆ ಗಂಭೀರ ಗಾಯವಾಗಿದ್ದು 13 ಹೊಲಿಗೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. 

ಜೆರ್ಸಿ ಕ್ರಿಕೆಟ್ ಆಧಾರಿತ ಚಿತ್ರವಾಗಿದ್ದು, ಕ್ರಿಕೆಟ್ ಆಡುತ್ತಿರುವ ವೇಳೆ ಶಾಹಿದ್ ಮುಖಕ್ಕೆ ಚೆಂಡು ಬಡಿದು ಅವರ ತುಟಿ ಸೀಳಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಚಿತ್ರದ ಚಿತ್ರೀಕರಣ ಚಂಡೀಗಢ್ ನಲ್ಲಿ ನಡೆಯುತ್ತಿತ್ತು.

ಜೆರ್ಸಿ ಚಿತ್ರ ಕ್ರಿಕೆಟ್ ಕುರಿತಾದ ಚಿತ್ರವಾಗಿದ್ದರಿಂದ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವ ಚಿತ್ರೀಕರಣ ವೇಳೆ ಈ ಘಟನೆ ನಡೆದಿದೆ. ಸದ್ಯ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions