ಸುಭಾಷಿತ :

Monday, February 24 , 2020 2:53 AM

ಅಭಿಮಾನಿಗಳ ಕಾಳಜಿಗೆ ಧನ್ಯವಾದ ತಿಳಿಸಿದ ನಟ ‘ಶಾಹಿದ್ ಕಪೂರ್’…!


Sunday, January 12th, 2020 7:03 pm

ಮುಂಬೈ:  ಜೆರ್ಸಿ ಚಿತ್ರದ ಶೂಟಿಂಗ್ ವೇಳೆ ಶಾಹಿದ್  ತುಟಿಗೆ ಗಂಭೀರ ಗಾಯವಾಗಿದ್ದು 13 ಹೊಲಿಗೆ ಹಾಕಲಾಗಿದೆ. ಈ ಬಗ್ಗೆ ಸ್ವತಹ ಟ್ವಿಟರ್ ನಲ್ಲಿ ಶಾಹಿದ್ ಕಪೂರ್ ಮಾಹಿತಿ ನೀಡಿದ್ದು, ಅಭಿಮಾನಿಗಳ ಕಾಳಜಿಗೆ ಧನ್ಯವಾದ ಅರ್ಪಿಸಿದ್ದಾರೆ.

ಜೆರ್ಸಿ ಕ್ರಿಕೆಟ್ ಆಧಾರಿತ ಚಿತ್ರವಾಗಿದ್ದು, ಕ್ರಿಕೆಟ್ ಆಡುತ್ತಿರುವ ವೇಳೆ ಶಾಹಿದ್ ಮುಖಕ್ಕೆ ಚೆಂಡು ಬಡಿದು ಅವರ ತುಟಿ ಸೀಳಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಚಂಡೀಗಢದಿಂದ ಶಾಹಿದ್ ಮುಂಬೈಗೆ ಬರುವ ವೇಳೆ ಮುಖಕ್ಕೆ ಮಾಸ್ಕ್ ಹಾಕಿದ್ದು, ಗಂಭೀರ ಗಾಯವಾಗಿರೋದು ಕರ್ನ್ಫರ್ಮ್ ಆಗಿದೆ. ಅಭಿಮಾನಿಗಳು ಕೂಡ ಶಾಹಿದ್ ಮುಖ ನೋಡಲು ಏರ್ ಪೋರ್ಟ್ ಬಳಿ ಕಾದು ಕುಂತಿದ್ದರು. ಆದರೆ ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದರಿಂದ ಎಷ್ಟು ಗಾಯ ಆಗಿದೆ ಎಂದು ಕನ್ಫರ್ಮ್ ಆಗಿಲ್ಲ.

ಜೆರ್ಸಿ ಚಿತ್ರ ಕ್ರಿಕೆಟ್ ಕುರಿತಾದ ಚಿತ್ರವಾಗಿದ್ದರಿಂದ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವ ಚಿತ್ರೀಕರಣ ವೇಳೆ ಈ ಘಟನೆ ನಡೆದಿದೆ. ವಿಶ್ರಾಂತಿ ಬಳಿಕ ಶಾಹಿದ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions