ಬಿಜೆಪಿ ಶಾಸಕ ರಾಮಮೂರ್ತಿಗೆ ಬಿಗ್ ಶಾಕ್ : ಚುನಾವಣಾ ವಿವಾದ ಸಂಬಂಧ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ : ಸುಪ್ರೀಂ ಕೋರ್ಟ್ ನಲ್ಲಿ ಜಯನಗರ ಶಾಸಕ ರಾಮಮೂರ್ತಿಗೆ ಭಾರಿ ಹಿನ್ನಡೆಯಾಗಿದೆ ಚುನಾವಣಾ ವಿವಾದ ಸಂಬಂಧ ಸಲ್ಲಿಸಿದ ರಾಮಮೂರ್ತಿ ಅರ್ಜಿಯನ್ನು ಇದೀಗ ಸುಪ್ರೀಂ ಕೋರ್ಟ್ ವಜಾ ಗೊಳಿಸಿದೆ. ಪ್ರಕರಣದ ಟ್ರಯಲ್ ತಡೆ ಕೋರಿ ಶಾಸಕ ರಾಮಮೂರ್ತಿ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ರಾಮಮೂರ್ತಿ ಅವರ ಅರ್ಜಿಯನ್ನು ವಜಾಗೊಳಿಸಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿಕ್ರಮನಾಥ್ ಅವರಿದ್ದಾ ಪೀಠ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.