BIGG NEWS : ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಕೇಸ್ : ಬ್ರಹ್ಮಗಂಟು ಸೀರಿಯಲ್ ನಟಿಗೆ ‘ISD’ ಬುಲಾವ್ – Kannada News Now


State

BIGG NEWS : ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಕೇಸ್ : ಬ್ರಹ್ಮಗಂಟು ಸೀರಿಯಲ್ ನಟಿಗೆ ‘ISD’ ಬುಲಾವ್

ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ಆಂತರಿಕ ಭದ್ರತಾ ವಿಭಾಗ ನಟ ಯೋಗಿ, ಮಾಜಿ ಕ್ರಿಕೆಟಿಗ ಅಯ್ಯಪ್ಪರನ್ನು ವಿಚಾರಣೆಗೊಳಪಡಿಸಿದೆ.

ಇದೀಗ ಬ್ರಹ್ಮಗಂಟು ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಪ್ರಮುಖ ನಟಿಗೆ ಐಎಸ್ ಡಿ ತಂಡ ಬುಲಾವ್ ನೀಡಿದೆ. ರಾಜ್ಯ ಆಂತರಿಕ ಭದ್ರತಾ ವಿಭಾಗವು ಪ್ರಮುಖ ನಟಿ ಗೀತಾಗೆ ಐಎಸ್ ಡಿ ಬುಲಾವ್ ನೀಡಿದೆ. ನಟಿ ಗೀತಾ ಭಾರತಿ ಭಟ್ ಸೇರಿದಂತೆ ಇಬ್ಬರು ನಾಳೆ ವಿಚಾರಣೆಗೊಳಪಡಲಿದ್ದಾರೆ.

ತನಿಖೆಯಲ್ಲಿ ನಟಿ ಗೀತಾ ಭಾರತಿ ಭಟ್ ಹಾಗೂ ಸ್ಥಳೀಯ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಆಂಕರ್ ಅಭಿಷೇಕ್ ಎಂಬುವವರಿಗೆ ಡ್ರಗ್ ಪೆಡ್ಲರ್ ಕರೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ, ಈ ಹಿನ್ನೆಲೆ ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

BREAKING : ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಕೇಸ್ : ಆರೋಪಿ ವಿರೇನ್ ಖನ್ನಾ ಮತ್ತೆ ಐದು ದಿನ ಸಿಸಿಬಿ ಕಸ್ಟಡಿಗೆ




error: Content is protected !!