ಸುಭಾಷಿತ :

Monday, February 17 , 2020 5:13 AM

ತಾಯಿಯಾದ ಬಳಿಕ ಮೊದಲ ಪ್ರಶಸ್ತಿ ಗೆದ್ದ ಸೆರೆನಾ ವಿಲಿಯಮ್ಸ್


Monday, January 13th, 2020 9:08 am

ಆಕ್ಲೆಂಡ್‌: ಗುರಿ ಸಾಧಿಸುವ ಛಲ ಇದ್ದರೆ ಅದಕ್ಕೆ ಯಾವುದೇ ಅಡ್ಡಿ ಬರೋದಿಲ್ಲ ಎನ್ನುವುದಕ್ಕೆ ಸೆರೆನಾ ವಿಲಿಯಮ್ಸ್‌ ಸಾಕ್ಷಿ. 3 ವರ್ಷಗಳ ಬಳಿಕ ಇದೀಗ ಸೆರೆನಾ ಡಬ್ಲ್ಯುಟಿಎ ಆಕ್ಲೆಂಡ್‌ ಕ್ಲಾಸಿಕ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ.

ರವಿವಾರ ನಡೆದ ಪ್ರಶಸ್ತಿ ಕಾಳಗದಲ್ಲಿ ಸೆರೆನಾ ಅಮೆರಿಕದವರೇ ಆದ ಜೆಸ್ಸಿಕಾ ಪೆಗ್ಯುಲಾ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿದರು. 38ರ ಹರೆಯದ ಸೆರೆನಾ ವಿಲಿಯಮ್ಸ್‌ ತಾಯಿಯಾದ ಬಳಿಕ ಗೆದ್ದ ಮೊದಲ ಟೆನಿಸ್‌ ಪ್ರಶಸ್ತಿ ಇದಾಗಿದೆ.

2017ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಬಳಿಕ ಸೆರೆನಾ ಯಾವುದೇ ಟ್ರೋಫಿ ಗೆದ್ದಿರಲಿಲ್ಲ. ಇದರೊಂದಿಗೆ ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಸೆಣಸಲು ಸೆರೆನಾಗೆ ಹೊಸ ಸ್ಫೂರ್ತಿ ಸಿಕ್ಕಿದಂತಾಗಿದೆ.

ಇದು ಸೆರೆನಾ ವಿಲಿಯಮ್ಸ್‌ ಜಯಿಸಿದ 73ನೇ ಡಬ್ಲ್ಯುಟಿಎ ಪ್ರಶಸ್ತಿ. 1999ರಲ್ಲಿ ಅವರು ಮೊದಲ ಪ್ರಶಸ್ತಿ ಪಡೆದಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions