ಪಂಜಾಬ್ : ಸ್ವಯಂ ಘೋಷಿತ ಸಿಖ್ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ನನ್ನು ಬಂಧಿಸುವ ಸಲುವಾಗಿ ರಾಜ್ಯದಾದ್ಯಂತ ಅನುಮಾನಾಸ್ಪದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈವರೆಗೆ 78 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಅಮೃತಪಾಲ್ ಸಿಂಗ್ ಬಂಧನ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯಾದ್ಯಂತ ನಾಳೆ ಮಧ್ಯಾಹ್ನ 12 ಗಂಟೆಯವರೆಗೆ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ಮಾಧ್ಯಮಗಳು ಅಮೃತಪಾಲ್ ಸಿಂಗ್ ಬಂಧನವಾಗಿದೆ ಎಂದು ವರದಿ ಮಾಡುತ್ತಿವೆ. ಆದರೆ ಈ ಬಗ್ಗೆ ಪೊಲೀಸರು ಸ್ಪಷ್ಟವಾದ ಮಾಹಿತಿಯನ್ನು ಹೊರ ಹಾಕಿಲ್ಲ.
ಕಳೆದ ತಿಂಗಳು ಅಮೃತಪಾಲ್ ಮತ್ತು ಅವರ ಬೆಂಬಲಿಗರಲ್ಲಿ ಅವರಲ್ಲಿ ಕೆಲವರು ಕತ್ತಿ ಮತ್ತು ಬಂದೂಕುಗಳನ್ನು ಝಳಪಿಸುತ್ತಾ, ಬ್ಯಾರಿಕೇಡ್‌ಗಳನ್ನು ಭೇದಿಸಿ ಅಮೃತಸರ ನಗರದ ಹೊರವಲಯದಲ್ಲಿರುವ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿದ್ದರು. ಅಮೃತ್‌ಪಾಲ್‌ನ ಸಹಾಯಕರಲ್ಲಿ ಒಬ್ಬನ ಬಿಡುಗಡೆಗಾಗಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು ಎಂದು ವರದಿಯಾಗಿತ್ತು.
Punjab Police launched a massive state-wide Cordon And Search Operations in the state against elements of Waris Punjab De. 78 persons arrested so far, while, several others detained. Several others including Amritpal Singh are on the run & a massive manhunt has been launched to… https://t.co/CX9M85F8Rz pic.twitter.com/mnZacHk2Qp
— ANI (@ANI) March 18, 2023
ದುಬೈಗೆ ಮರಳಿದ ಅಮೃತಪಾಲ್ ಸಿಂಗ್ ಕಳೆದ ವರ್ಷ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಟ ಮತ್ತು ಕಾರ್ಯಕರ್ತ ದೀಪ್ ಸಿಧು ಅವರು ಸ್ಥಾಪಿಸಿದ ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಮುಖ್ಯಸ್ಥರಾಗಿದ್ದಾರೆ.
ಮೂಲಭೂತವಾದ ಪ್ರತ್ಯೇಕತಾವಾದಿ ನಾಯಕನನ್ನು ಸಾಮಾನ್ಯವಾಗಿ ಸಶಸ್ತ್ರ ಬೆಂಬಲಿಗರು ಬೆಂಗಾವಲು ಮಾಡುತ್ತಾರೆ. ಅವರು ಪಂಜಾಬ್‌ನಲ್ಲಿ ಕೆಲವು ಸಮಯದಿಂದ ಸಕ್ರಿಯರಾಗಿದ್ದಾರೆ ಎನ್ನಲಾಗುತ್ತಿದೆ.
JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ಮಾ. 21 ರಂದು ಉಡುಪಿಯಲ್ಲಿ ‘ಉದ್ಯೋಗ ಮೇಳ’ ಆಯೋಜನೆ
BREAKING NEWS: ಮಾ.21ರಿಂದ ಕರೆ ನೀಡಲಾಗಿದ್ದ ಸಾರಿಗೆ ನೌಕರರ ಮುಷ್ಕರ ವಾಪಾಸ್ | KSRTC Employees Strike
BIGG NEWS : ಮೇ ತಿಂಗಳಲ್ಲಿ ‘ಗಗನಯಾನ’ ಪ್ರಯೋಗಕ್ಕೆ ಚಾಲನೆ ; ಕೇಂದ್ರ ಸರ್ಕಾರ ಘೋಷಣೆ