ವಿಜಯಪುರ: ಸರ್ಕಾರಿ ಶಾಲೆಯ ಮಕ್ಕಳನ್ನು ಪಿಕ್ ನಿಕ್ ಗೆ ಕರೆದೊಯ್ಯುತ್ತಿದ್ದಂತ ಟೆಂಪೋ ಟ್ರಾವೆಲ್ ಪಲ್ಟಿಯಾದ ಪರಿಣಾಮ ಕ್ಲೀನರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ ಶಿಕ್ಷಕರು ಸೇರಿದಂತೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರೋ ಘಟನೆ, ತಾಳಿಕೋಟೆಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆಯ ಚೊಕಾವಿ ಸರ್ಕಾರಿ ಹಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪಿಕ್ ನಿಕ್ ಗೆ ತೆರಳಿದ್ದರು. ತಾಳಿಕೋಟೆ ಸಮೀಪದ ಕೂಚಬಾಳ-ಬಾವೂರ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಪರಿಣಾಮ, ಬಸ್ ಕ್ಲೀನರ್ ದಾವಲಸಾಬ ಅಲ್ಲಿಸಾಬ ಸಾಲವಾಡಗಿ (40) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
BIGG BREAKING NEWS: ‘ಉಕ್ರೇನ್’ನಲ್ಲಿ ಇಂಟರ್ನೆಟ್ ಸ್ಥಗಿತ | Russia-Ukraine Crisis
ಇನ್ನೂ ಬಸ್ಸಿನಲ್ಲಿದ್ದಂತ ಶಿಕ್ಷಕರು ಸೇರಿದಂತೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಕೂಡಲೇ ವಿದ್ಯಾರ್ಥಿಗಳನ್ನು ತಮದಡ್ಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.