ನಾಗ್ಪುರ: 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆಟೋ ಚಾಲಕನೊಂದಿಗೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಆತ ಆಕೆಯೊಂದಿಗೆ ಅನುಚಿತವಾಗಿ ನಡೆದುಕೊಂಡಿರುವ ಘಟನೆ ಬುಧವಾರ ನಡೆದಿದೆ.

ಬಾಲಕಿಯನ್ನು 25 ವರ್ಷದ ಆಟೋರಿಕ್ಷಾ ಚಾಲಕ ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದು, ಬಾಲಕಿಗೆ ಕಿರುಕುಳ ನೀಡಿದ ಎನ್ನಲಾಗಿದೆ. ನಾಗ್ಪುರದ ಓಂಕಾರ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಆಟೋ ಚಾಲಕನ ಅಶಿಸ್ತಿನ ಕೃತ್ಯವನ್ನು ಸ್ಥಳೀಯರೊಬ್ಬರು ವೀಡಿಯೊ ರೆಕಾರ್ಡ್ ಮಾಡಿದ್ದಾರೆ.

ಆಟೋ ಚಾಲಕ ತನ್ನ ವಾಹನದ ಹೊರಗೆ ನಿಂತು ಅಪ್ರಾಪ್ತ ಬಾಲಕಿ ಕುಳಿತಿದ್ದ ಹಿಂದಿನ ಸೀಟಿಗೆ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಆಟೋ ಚಾಲಕ ಪದೇ ಪದೇ ಹಿಂದಕ್ಕೆ ತಿರುಗಿ ಹುಡುಗಿಯನ್ನು ಅನುಚಿತ ರೀತಿಯಲ್ಲಿ ಸ್ಪರ್ಶಿಸಿ, ಅವಳಿಗೆ ಕಿರುಕುಳ ನೀಡುವುದನ್ನು ನೋಡಬಹುದಾಗಿದೆ.

Share.
Exit mobile version