ದಾವಣಗೆರೆ: ಶಾಲಾ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದಂತ ಸಂದರ್ಭದಲ್ಲಿ ಬಸ್ ವಾಹನವೊಂದು ಕೆರೆಯ ಏರಿಗೆ ಡಿಕ್ಕಿಯಾದ ಪರಿಣಾಮ, ವಾಹನದಲ್ಲಿದ್ದಂತ 20ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರೋ ಘಟನೆ ದಾವಣಗೆರೆಯ ಜಗಳೂರಿನಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಜಗಳೂರಿನಿಂದ ಶಾಲಾ ಬಸ್ ಒಂದು ಶಾಲೆ ಮುಗಿದ ನಂತ್ರ ಮಕ್ಕಳನ್ನು ಮನೆಗೆ ಬಿಡೋದಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹಾಲೇನಹಳ್ಳಿ ಕ್ರಾಸ್ ಬಳಿಯಲ್ಲಿ ಕೆರೆ ಏರಿಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯಿಂದಾಗಿ 20ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಶಾಲಾ ವಾಹನ ಕೆರೆ ಏರಿಗೆ ಡಿಕ್ಕಿಯಾಗಿ ಮಕ್ಕಳು ಗಾಯಗೊಂಡಿದ್ದನ್ನು ಗಮನಿಸಿದಂತ ಸ್ಥಳೀಯರು, ಕೂಡಲೇ ಮಕ್ಕಳನ್ನು ರಕ್ಷಿಸಿ, ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Covid19 Karnataka Case: ರಾಜ್ಯದಲ್ಲಿ ಕಳೆದ 2 ವಾರಗಳಿಂದ ಹೆಚ್ಚಾದ ಕೊರೋನಾ: 3ನೇ ಅಲೆ ಆರಂಭ.?