ಬೆಂಗಳೂರು : ಧಾರವಾಡದಲ್ಲಿ ಡಬಲ್ ಮರ್ಡರ್ ನಡೆದ ಬೆನ್ನಲ್ಲೇ ಕ್ಷುಲ್ಲಕ ಕಾರಣಕ್ಕೆ ಬೆಂಗಳೂರಿನಲ್ಲಿ ಯುವಕನ ಕೊಲೆ ನಡೆದಿದೆ.
ಮಹದೇವಪುರದಲ್ಲಿ 24 ವರ್ಷದ ರೇಣುಕುಮಾರ್ ಕೊಲೆಯಾದ ಯುವಕ ಕ್ಷುಲ್ಲಕ ಕಾರಣಕ್ಕೆ ರೇಣುಕುಮಾರ್ ಜೊತೆ ಜಗಳ ಮಾಡಿಕೊಂಡ ರೇಣುಕುಮಾರ್ ಗೆ ಚಾಕುವಿನಿಂದ ಇರಿಯಲಾಗಿದೆ, ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ, ಕ್ಷುಲ್ಲಕ ಕಾರಣಕ್ಕೆ ಮಂಡ್ಯದಲ್ಲಿ ಕೂಡ ಕೊಲೆ ನಡೆದಿದೆ. ಚಿಕ್ಕರಸಿನಕೆರೆ ಗ್ರಾಮದ ಪುನೀತ್ ಎಂಬಾತನನ್ನು ಕೊಲೆ ಮಾಡಲಾಗಿದೆ. ಮಂಡ್ಯದ ಮದ್ದೂರಿನ ಬೋರಾಪುರದ ಬಳಿ ಘಟನೆ ನಡೆದಿದೆ.
ಧಾರವಾಡದಲ್ಲಿ ಡಬಲ್ ಮರ್ಡರ್
ಧಾರವಾಡ : ಧಾರವಾಡದಲ್ಲಿ ತಡರಾತ್ರಿ ಮಚ್ಚಿನಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ.
ಧಾರವಾಡ ನಗರದ ಕಮಲಾಪುರ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಮಹಮದ್ ಕುಡಚಿ ಸೇರಿ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಮನೆ ಮುಂದೆ ಕುಳಿತಿದ್ದ ಮಹಮದ್ ಮೇಲೆ ಮಚ್ಚಿನಿಂದ ದಾಳಿ ನಡೆಸಿದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳುದು ಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಹುಧಾ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಭೇಟಿ ನೀಡಿದ್ದಾರೆ. ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Indira Canteen : ಶೀಘ್ರದಲ್ಲೇ ಬಡವರ 5 ಸ್ಟಾರ್ ‘ಇಂದಿರಾ ಕ್ಯಾಂಟೀನ್’ ಓಪನ್ : ಹೀಗಿದೆ ನೋಡಿ ಮೆನು
Indira Canteen : ಶೀಘ್ರದಲ್ಲೇ ಬಡವರ 5 ಸ್ಟಾರ್ ‘ಇಂದಿರಾ ಕ್ಯಾಂಟೀನ್’ ಓಪನ್ : ಹೀಗಿದೆ ನೋಡಿ ಮೆನು