ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಗಳಲ್ಲಿ ಒಂದಾಗಿರುವಂತ ಭಾರತೀಯ ಸ್ಟೇಟ್ ಬ್ಯಾಂಕ್ ( State Bank of India – SBI ), ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈ ಮೂಲಕ ತನ್ನ ಬ್ಯಾಂಕ್ ಗಳಲ್ಲಿ ಠೇವಣಿ ಇರಿಸಿರುವಂತ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 2 ಕೋಟಿ ರೂಪಾಯಿಯವರೆಗೆ 1 ರಿಂದ 2 ವರ್ಷದೊಳಗೆ ಠೇವಣಿ ಇರಿಸಿದ್ದರೇ, ಅದಕ್ಕೆ ಬಡ್ಡಿಯಲ್ಲಿ 10 ಮೂಲಾಂಶ ( ಶೇ.0.10) ಹೆಚ್ಚಳ ಮಾಡಿದೆ. ಪರಿಷ್ಕೃತ ಬಡ್ಡಿ ದರ ಶೇ.5.10 ಆಗಲಿದೆ. ಈ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಳ ನಿಯಮ ಶನಿವಾರದಿಂದಲೇ ಜಾರಿಗೊಳ್ಳಲಿವೆ.
BIG BREAKING: ‘ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’ ಟ್ಯಾಬ್ಲೋ, ‘ಗಣರಾಜ್ಯೋತ್ಸವ ಪೆರೇಡ್’ಗೆ ಆಯ್ಕೆ
ಇನ್ನೂ ಹಿರಿಯ ನಾಗರೀಕರು ಠೇವಣಿ ಇರಿಸಿದ್ದರೇ, ಶೇ.5.60 ಬಡ್ಡಿದರ ದೊರೆಯಲಿದೆ. ಈ ಹಿಂದೆ ಇದು ಶೇ.5.50 ಆಗಿತ್ತು. ಇದನ್ನೊರತುಪಡಿಸಿ, ಇನ್ನುಳಿದ ಯಾವುದೇ ಠೇವಣಿಗಳ ಸ್ವರೂಪದ ಬಡ್ಡಿದರದಲ್ಲಿ ಹೆಚ್ಚಳ ಆಗಿಲ್ಲ. ಅವುಗಳಿಗೆ ಆಗಸ್ಟ್ 1, 2021ರಿಂದ ಚಾಲ್ತಿಯಲ್ಲಿರುವಂತ ಬಡ್ಡಿದರಗಳೇ ಮುಂದುವರೆಯಲಿವೆ.