ಬೆಂಗಳೂರು : ಡಿ.31 ರ ಕರ್ನಾಟಕ ಬಂದ್ ನ್ನು ಮುಂದೂಡಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಬಂದ್ ನಡೆಸುವುದು ಖಚಿತ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಎಂಇಎಸ್ ನಿಷೇಧ ಮಾಡುವುದಕ್ಕೆ ಕಾಲಾವಕಾಶ ಕೇಳಿದ್ದಾರೆ. ತಜ್ಞರ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಹಾಗಾಗಿ ಡಿ.31 ರ ಕರ್ನಾಟಕ ಬಂದ್ ನ್ನು ಮುಂದೂಡಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಬಂದ್ ನಡೆಸುವುದು ಖಚಿತ, ಸಿಎಂ ಬೊಮ್ಮಾಯಿ ಬಂದ್ ಮುಂದೂಡುವಂತೆ ಮನವಿ ಮಾಡಿದ್ದರು. ಹಾಗಾಗಿ ಬಂದ್ ಮುಂದೂಡಲು ನಿರ್ಧರಿಸಲಾಗಿದೆ. ಶೀಘ್ರವೇ ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನೂ, ಎಂಇಎಸ್ ನಿಷೇಧ ಮಾಡುವುದಕ್ಕೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ. ಕರ್ನಾಟಕ ಬಂದ್ ( Karnataka Bundh ) ಹಿಂಪಡೆಯುವಂತೆ ಸಿಎಂ ಕೋರಿಕೊಂಡರು. ಸಿಎಂ ಮನವಿಯ ಮೇರೆಗೆ ನಾವೆಲ್ಲಾ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಒಕ್ಕೂಟದ ಮುಖಂಡರು ತೀರ್ಮಾನ ಕೈಗೊಂಡು, ಹೊಸ ವರ್ಷಕ್ಕೆ ತೊಂದರೆಯಾಗಲಿದೆ, ಅದು ಸರಿಯಿಲ್ಲ ಎಂಬುದಾಗಿ ತೀರ್ಮಾನ ಕೈಗೊಂಡ ಕಾರಣ, ನಾಳಿನ ಕರ್ನಾಟಕ ಬಂದ್ ಮುಂದೂಡಿಕೆ ( Karnataka Bundh Postpone ) ಮಾಡಲಾಗಿರೋದಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
BIG BREAKING NEWS: ನಾಳೆ ನಿಗದಿಯಾಗಿದ್ದ ಕರ್ನಾಟಕ ಬಂದ್ ವಾಪಾಸ್ – ವಾಟಾಳ್ ನಾಗರಾಜ್