ಸುಭಾಷಿತ :

Tuesday, February 18 , 2020 1:51 PM

ಸಂಕ್ರಾಂತಿ ಹಬ್ಬದ ವಿಶೇಷ : ಸಿಹಿ ಪೊಂಗಲ್ ಮಾಡುವ ವಿಧಾನ


Tuesday, January 14th, 2020 3:47 pm


ಸ್ಪೆಷಲ್‌ಡಸ್ಕ್: ಸಂಕ್ರಾಂತಿಗೆ ಮುಖ್ಯವಾಗಿ ಮಾಡುವ ತಿನಿಸು ಎಂದರೆ ಪೊಂಗಲ್. ಅದರಲ್ಲೂ ಸಿಹಿ ಪೊಂಗಲ್ ವಿಶೇಷವಾಗಿ ಮಾಡಲಾಗುತ್ತದೆ. ಇದನ್ನು ಹೇಗೆ ಮಾಡೋದು ಅನ್ನೋದನ್ನು ನೋಡೋಣ…

ಬೇಕಾಗುವ ಸಾಮಾಗ್ರಿಗಳು
1/2 ಕಪ್‌ ಅಕ್ಕಿ, 1/2 ಕಪ್‌ ಹೆಸರು ಬೇಳೆ , 1/2 ಕಪ್‌ ಬೆಲ್ಲ , ಅರ್ಧ ಚಮಚ ಏಲಕ್ಕಿ, 2-3 ಚಮಚ ತುಪ್ಪ, 1 ಚಮಚ ಒಣದ್ರಾಕ್ಷಿ,
5-6 ಗೋಡಂಬಿ, 2 ಲವಂಗ.

ತಯಾರಿಸುವ ವಿಧಾನ:

ಕುಕ್ಕರ್ ನಲ್ಲಿ ಬಿಸಿ ಮಾಡಿ ಅದಕ್ಕೆ 1 ಚಮಚ ತುಪ್ಪ ಹಾಕಿ ಅದರಲ್ಲಿ ಹೆಸರು ಬೇಳೆ ಹಾಕಿ, ಹೆಸರು ಬೇಳೆಯಿಂದ ಪರಿಮಳ ಬರುವವರೆಗೆ ಫ್ರೈ ಮಾಡಿ.  ಬಳಿಕ ಪಾತ್ರೆಗೆ ಅಕ್ಕಿಯನ್ನು ತೊಳೆದು ಹಾಕಿ ನಂತರ 3 ಕಪ್‌ ನೀರು ಹಾಕಿ ಅಕ್ಕಿ ಚೆನ್ನಾಗಿ ಬೇಯುವವರೆಗೆ ಬೇಯಿಸಿ  ಮತ್ತೊಂದು ಪಾತ್ರೆಯಲ್ಲಿ ಬೆಲ್ಲದ ಪಾಕ ತಯಾರಿಸಿ.  ಅನ್ನ ಮತ್ತು ಬೇಳೆ ಚೆನ್ನಾಗಿ ಬೆಂದ ಬಳಿಕ ಬೆಲ್ಲದ ಪಾಕವನ್ನು ಅನ್ನದ ಪಾತ್ರೆಗೆ ಸುರಿಯಿರಿ. ಏಲಕ್ಕಿ ಜಜ್ಜಿ ಹಾಕಿ. ಬೆಲ್ಲ ಮಿಶ್ರ ಮಾಡಿದ ಅನ್ನ ಕುದಿ ಬರಲಾರಂಭಿಸಿದಾಗ ಉರಿಯಿಂದ ಇಳಿಸಿ.  ಇದೀಗ ಮತ್ತೊಂದು ಪ್ಯಾನ್‌ ಬಿಸಿ ಮಾಡಿ, ಅದಕ್ಕೆ ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ಲವಂಗ ಹಾಕಿ ನಂತರ ಒಣ ದ್ರಾಕ್ಷಿ, ಗೋಡಂಬಿ, ಹಾಕಿ 2 ನಿಮಿಷ ಫ್ರೈ ಮಾಡಿ ರೆಡಿ ಪೊಂಗಲ್‌ಗೆ ಹಾಕಿ. ಈಗ ರುಚಿಯಾದ ಸಿಹಿ ಪೊಂಗಲ್ ರೆಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions