ಸುಭಾಷಿತ :

Tuesday, February 18 , 2020 1:53 PM

ಸಂಕ್ರಾಂತಿ ಸ್ಪೆಷಲ್ : ಇಲ್ಲಿದೆ ಖಾರ ಪೊಂಗಲ್‌ ಮಾಡುವ ವಿಧಾನ


Wednesday, January 15th, 2020 10:36 am


ಸ್ಪೆಷಲ್‌ಡೆಸ್ಕ್: ಸಿಹಿ ಪೊಂಗಲ್ ನಂತೆ ಸಂಕ್ರಾಂತಿ ಹಬ್ಬಕ್ಕೆ ಮಾಡುವಂತಹ ಮತ್ತೊಂದು ತಿನಿಸು ಎಂದರೆ ಅದು ಖಾರ ಪೊಂಗಲ್. ಮಾಡೋದು ಹೇಗೆ ಅನ್ನೋದನ್ನು ನೋಡೋಣ.

ಬೇಕಾಗುವ ಸಾಮಗ್ರಿಗಳು : ಹೆಸರು ಬೇಳೆ – 3/4 ಕಪ್, ಅಕ್ಕಿ -3/4 ಕಪ್, ಜೀರಿಗೆ -1 ಟೀ ಚಮಚ, ಶುಂಠಿ- 1 ಇಂಚು ಕರಿಬೇವು/ – 8-9, ಹಸಿ ಮೆಣಸಿನ ಕಾಯಿ, 2 ಚಮಚ ಕಾಳು ಮೆಣಸಿನ ಪುಡಿ, -3/4 ಟೀ ಚಮಚ, ಗೋಡಂಬಿ. 8-10, ಅರಿಶಿನ ಪುಡಿ-ಚಿಟಿಕೆ ಉಪ್ಪು- ರುಚಿಗೆ ತಕ್ಕಷ್ಟು, ತುಪ್ಪ- 1, 1/4 ಟೇಬಲ್ ಚಮಚ

ತಯಾರಿಸುವ ವಿಧಾನ :
ಕುಕ್ಕರ್ನಲ್ಲಿ ಅಕ್ಕಿ ಮತ್ತು ಹೆಸರು ಬೇಳೆಯನ್ನು ಸೇರಿಸಿ, 3 ನಿಮಿಷಗಳ ಕಾಲ ಹುರಿಯಿರಿ. ಅದಕ್ಕೆ 6 ಕಪ್ ನೀರನ್ನು ಸೇರಿಸಿ. ಮುಚ್ಚಳವನ್ನು ಮುಚ್ಚಿ.
ಕುಕ್ಕರ್ 4-5 ಸೀಟಿ ಕೂಗಲು ಬಿಡಿ. ನಂತರ ಒಂದು ಪಾತ್ರೆಗೆ ತುಪ್ಪವನ್ನು ಹಾಕಿ, ಬಿಸಿ ಮಾಡಿ. ಅದಕ್ಕೆ ಜೀರಿಗೆ ಮತ್ತು ಕರಿಬೇವಿನ ಎಲೆ ಸೇರಿಸಿ.
ಅದಕ್ಕೆ ತುರಿದುಕೊಂಡ ಶುಂಠಿ,ಹಸಿಮೆಣಸಿನ ಕಾಯಿಯನ್ನು ಸೇರಿಸಿ ಚೆನ್ನಾಗಿ ತಿರುವಿ.
ಕಾಳು ಮೆಣಸಿನ ಪುಡಿ ಮತ್ತು ಗೋಡಂಬಿಯನ್ನು ಸೇರಿಸಿ. ನಂತರ ಅರಿಶಿನವನ್ನು ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ.
ಇದಕ್ಕೆ ಬೇಯಿಸಿಕೊಂಡ ಅನ್ನ ಮತ್ತು ಬೇಳೆಯನ್ನು ಸೇರಿಸಿ. ಒಂದು ಕಪ್ ನೀರನ್ನು ಸೇರಿಸಿ, ಎಲ್ಲಾ ಸಾಮಾಗ್ರಿಗಳು ಹೊಂದಿಕೊಳ್ಳುವಂತೆ ಚೆನ್ನಾಗಿ ಮಿಕ್ಸ್ ಮಾಡಿ. 5 ನಿಮಿಷಗಳ ಕಾಲ ಬೇಯಿಸಿ.
ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಮಿಶ್ರಗೊಳಿಸಿ. ಉರಿಯಿಂದ ಕೆಳಗಿಳಿಸಿ.
ಈಗ ಬಿಸಿ ಬಿಸಿಯಾದ ಪೊಂಗಲ್ ಸವಿಯಲು ನೀಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions