ಮಂಡ್ಯ : ಸಂಕ್ರಾಂತಿ ಹಬ್ಬದ ಅಂಗವಾಗಿ ಮದ್ದೂರು ಕ್ಷೇತ್ರದ ಪ್ರತಿಯೊಂದು ಮನೆಗೂ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಾಗೀನ, ಸೀರೆ ಹಾಗೂ ಹೊಸ ವರ್ಷದ ಕ್ಯಾಲೆಂಡರ್ ವಿತರಣೆ ಮಾಡಲಾಗುತ್ತಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆ.ಎಂ.ಉದಯ್ ತಿಳಿಸಿದರು.

ಮದ್ದೂರು ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ಗುರುವಾರ ಮದ್ದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಮನೆಗೆ ಬಾಗೀನ, ಸೀರೆ ಮತ್ತು ಕ್ಯಾಲೆಂಡರ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಕುಟುಂಬಕ್ಕೂ ಬಾಗಿನ ನೀಡಬೇಕು ಎಂದು ತಿರ್ಮಾನಿಸಲಾಗಿತ್ತು. ಆ ಸಮಯದಲ್ಲಿ ಉದಯಯಾನ ಎಂಬ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಿ ಶ್ರಮಿಕರಿಗೆ, ಆಟೋ, ಕ್ಯಾಬ್ ಚಾಲಕರಿಗೆ, ಕಾರ್ಮಿಕರಿಗೆ, ಅಂಗವಿಕಲರಿಗೆ ಸೇರಿದಂತೆ ಇತರರಿಗೆ ಆಹಾರ್ ಕಿಟ್ ಜತೆಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಆದ್ದರಿಂದ ಆ ಸಂದರ್ಭದಲ್ಲಿ ನೀಡಲಾಗದ ಬಾಗಿನವನ್ನು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದರು.

ಸೇವೆ ಮಾಡುವುದು ನನ್ನ ಧರ್ಮ, ನನ್ನ ತಾಲೂಕಿನ ಜನತೆಯ ಪರವಾಗಿ ನಿಲ್ಲುವುದೇ ನನ್ನ ಧ್ಯೇಯವಾಗಿದ್ದು, ಈಗಾಗಲೇ ತಾಲೂಕಿನಲ್ಲಿ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಟ್ರಸ್ಟ್ ವತಿಯಿಂದ ಹಮ್ಮಿಕೊಂಡು ಪ್ರತಿ ನಿತ್ಯ ಜನರಿಗೆ ಅನುಕೂಲ ಕಲ್ಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕ್ಷೇತ್ರದ ಜನರಿಗೆ ಅನುಕೂಲ ಕಲ್ಪಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದರು.

ಗುರುವಾರ ತಾಲೂಕಿನ ಮಲ್ಲನಕುಪ್ಪೆ, ಚಾಮನಹಳ್ಳಿ, ಹೂತಕೆರೆ, ಹೆಮ್ಮನಹಳ್ಳಿ, ಅಣ್ಣೂರು, ಕೆ.ಶೆಟ್ಟಹಳ್ಳಿ, ಕೆ.ಹೊನ್ನಲಗೆರೆ, ನಿಲುವಾಗಿಲು, ಮಾದರಹಳ್ಳಿ, ಗೆಜ್ಜಲಗೆರೆ, ತೊರೆ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಸಂಕ್ರಾಂತಿ ಬಾಗಿನ ನೀಡಲಾಯಿತು.

ಇದೇ ವೇಳೆ ವಿಜಯ್ ವಿಕ್ರಂ, ಗೋವಿಂದು, ಶೇಖರ್, ರಾಮಚಂದ್ರ, ಪ್ರೇಮಮ್ಮ, ಭವ್ಯ, ನವೀನ್, ಮನು, ಪ್ರವೀಣ್, ಪ್ರದೀಪ್, ವಿಜೇಯೇಂದ್ರ, ಅಪ್ಪಾಜಿಗೌಡ, ರಮೇಶ್, ಪಾಪಣ್ಣ ಸೇರಿದಂತೆ ಮತ್ತಿತರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ – ನಿತಿನ್ ಗಡ್ಕರಿ

BREAKING NEWS: ವಿಧಾನಸೌಧದಲ್ಲಿ ಅನಧಿಕೃತ 10.5 ಲಕ್ಷ ನಗದು ಪತ್ತೆ ಪ್ರಕರಣ: ವಿಚಾರಣೆಗೆ ಹಾಜರಾದ ಎಇ ಜಗದೀಶ್ ಬಂಧನ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಡಿ ಸಾಲಸೌಲಭ್ಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Share.
Exit mobile version