ಸುಭಾಷಿತ :

Monday, February 24 , 2020 1:51 AM

ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿ ಫೈನಲ್ ಪ್ರವೇಶಿಸಿದ ಸಾನಿಯಾ ಮಿರ್ಜಾ


Friday, January 17th, 2020 11:40 am

ಹೊಬರ್ಟ್: ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಉಕ್ರೈನ್ ನ ಜತೆಗಾರ್ತಿ ನದಿಯಾ ಕಿಚ್ನಾಕ್ ಜೊತೆ ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪೈನಲ್ ತಲುಪಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಡಬಲ್ಸ್ ಸೆಮಿಫೈನಲ್ ಹಣಾಹಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಾನಿಯಾ ಹಾಗೂ ನದಿಯಾ ಜೋಡಿಯು 7-6, 6-2 ಅಂತರದಲ್ಲಿ ನೇರ ಸೆಟ್ ಗಳಲ್ಲಿ ಮರಿಯಾ ಬೌಸ್ಕೊವಾ ಹಾಗೂ ತಮರಾ ಝಿಡಾನ್ಸೆಕ್ ಜೋಡಿಯ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.

ಸಾನಿಯಾ ವೃತ್ತಿಜೀವನದಲ್ಲಿ ಡಬ್ಲ್ಯುಟಿಎ ಡಬಲ್ಸ್ ಶ್ರೇಯಾಂಕದಲ್ಲಿ 91 ವಾರಗಳ ಕಾಲ ಅಗ್ರಸ್ಥಾನದಲ್ಲಿದ್ದರು. 2017 ರ ಚೀನಾ ಓಪನ್‌ನಲ್ಲಿ ಸೆಮಿಫೈನಲ್ನಂತರ ಡಬ್ಲ್ಯುಟಿಎ ಟೂರ್ನಿಯಿಂದ ದೂರವಿದ್ದ ಇವರು ಇದೀಗ ಮತ್ತೆ ಕ್ರೀಡಾಲೋಕಕ್ಕೆ ಮರಳಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions