ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ‘ನಟಿ ಚಂದನಾ’ ಆತ್ಮಹತ್ಯೆ – Kannada News Now


Film Sandalwood

ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ‘ನಟಿ ಚಂದನಾ’ ಆತ್ಮಹತ್ಯೆ

ಬೆಂಗಳೂರು : ಪ್ರಿಯಕರ ಮದುವೆಯಾಗುವುದಾಗಿ ನಂಬಿಸಿ, ಮೋಸ ಮಾಡಿದ್ದರಿಂದಾಗಿ ಬೇಸರಗೊಂಡ ಸ್ಯಾಂಡಲ್ ವುಡ್ ನಟಿ ಚಂದನಾ ಲೈವ್ ವೀಡಿಯೋ ಮಾಡುತ್ತಾ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೇ.28ರಂದು ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಜಾಹಿರಾತು, ಸಿನಿಮಾಗಳಲ್ಲಿ ನಟಿಸಿದ್ದಂತ ಸ್ಯಾಂಡಲ್ ವುಡ್ ನಟಿ ಚಂದನಾ(29) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಕೃಷ್ಣ ಮೂರ್ತಿ ಲೇಔಟ್ ನಲ್ಲಿ ವಾಸವಿದ್ದಂತ ಸ್ಯಾಂಡಲ್ ವುಡ್ ನಟಿ ಚಂದನಾ, ದಿನೇಶ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಆದ್ರೇ ಇತ್ತೀಚೆಗೆ ಪ್ರಿಯಕರ ದಿನೇಶ್ ಮದುವೆಯಾಗುವುದಾಗಿ ನಂಬಿಸಿ, ಮೋಸ ಮಾಡಿದ್ದರು. ಅಲ್ಲದೇ 5 ಲಕ್ಷ ಹಣ ಕೂಡ ಪಡೆದು ವಂಚಿಸಿದ್ದಂತೆ. ಈ ವಿಷವನ್ನೆಲ್ಲಾ ಲೈವ್ ವೀಡಿಯೋದಲ್ಲಿ ಹೇಳಿಕೊಂಡು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.