ಪ್ರಕೃತಿ ಪ್ರೇಮಿಗಳಿಗೆ ಸಿಹಿ ಸುದ್ದಿ: ಪರಿಸರ ಮಾಲಿನ್ಯದ ಪ್ರಮಾಣ ತೋರಿಸುತ್ತೆ ಈ ಮೊಬೈಲ್ ʼಆಪ್ಲಿಕೇಶನ್ʼ..! – Kannada News Now


India

ಪ್ರಕೃತಿ ಪ್ರೇಮಿಗಳಿಗೆ ಸಿಹಿ ಸುದ್ದಿ: ಪರಿಸರ ಮಾಲಿನ್ಯದ ಪ್ರಮಾಣ ತೋರಿಸುತ್ತೆ ಈ ಮೊಬೈಲ್ ʼಆಪ್ಲಿಕೇಶನ್ʼ..!

ನವದೆಹಲಿ: ಕೇಂದ್ರ ಸರ್ಕಾರದಿಂದ ಪರಿಸರದ ಕುರಿತು ಮತ್ತೊಂದು ಹೆಜ್ಜೆ ಇಟ್ಟಿದ್ದು, ಮೊಬೈಲ್​ ಅಪ್ಲಿಕೇಷನ್​ವೊಂದರ ಮೂಲಕ ಮಾಲಿನ್ಯ ತಡೆಗಟ್ಟುವ ಪ್ರಯತ್ನಕ್ಕೆ ಮುಂದಾಗಿದೆ.

ಹೌದು, ಈ ಹಿಂದೆ ಕೊರೊನಾ ಸೋಂಕಿತರ ಸುಳಿವು ತಿಳಿಯಲು ಆರೋಗ್ಯ ಸೇತು ಆಪ್ಲಿಕೇಶನ್‌ ರೂಪಿಸಿದ್ದ ಕೇಂದ್ರ ಸರ್ಕಾರ, ಇದೀಗ ಪರಿಸರ ಮಾಲಿನ್ಯದ ದುಷ್ಪರಿಣಾಮ ತಡೆಯುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಇಲಾಖೆ ಇಂತಹದ್ದೇ ಕ್ರಮ ಅನುಸರಿಸುತ್ತಿದೆ. ‘ಸಮೀರ್​’ ಎನ್ನುವ ಅಪ್ಲಿಕೇಶನ್‌ ಒಂದನ್ನ ಹೊರತಂದಿದೆ.

ಈ ಸಮೀರ್ ಅಪ್ಲಿಕೇಶನ್‌ ದೇಶಾದ್ಯಂತ ವಿವಿಧ ನಗರಗಳಲ್ಲಿನ ಪರಿಸರ ಮಾಲಿನ್ಯ ಪ್ರಮಾಣವನ್ನ ತಿಳಿಸುತ್ತದೆ. ಇನ್ನು ಅತಿಹೆಚ್ಚು ಮಾಲಿನ್ಯ ಹೊಂದಿರುವ ಪ್ರದೇಶವನ್ನ ಕೆಂಪು ಗುರುತಿನ ಮೂಲಕ ತೋರಿಸುತ್ತೆ. ಈ ಮೂಲಕ ಸಾರ್ವಜನಿಕರು ಅಂಥ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಬಹುದು ಅಥವಾ ಸೂಕ್ತ ಮುನ್ನೆಚ್ಚರಿಕೆ ಕಂಡುಕೊಳ್ಳಬಹುದು ಎಂಬುದು ಪರಿಸರ ಇಲಾಖೆಯ ಉದ್ದೇಶವಾಗಿದೆ. ಹಾಗಾಗಿ ಪ್ರತಿಯೊಬ್ಬರು ಈ ಅಪ್ಲಿಕೇಶನ್‌ ಡೌನ್​ಲೋಡ್ ಮಾಡಿಕೊಳ್ಳುವಂತೆ, ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್​ ಮನವಿ ಮಾಡಿದ್ದಾರೆ.

 
error: Content is protected !!