ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸೌತ್ ಸಿನಿಮಾ ರಂಗದ ಬ್ಯೂಟಿ ಸಮಂತಾ ಈಗ ಬೇಜಾನ್ ಬ್ಯುಸಿಯೆಸ್ಟ್ ನಟಿ..ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸ್ತಿರುವ ಸ್ಯಾಮ್ ಟೂ ಹಾಟಿ ಅನ್ನೋದು ಎಲ್ಲರಿಗೂ ಗೊತ್ತು. ಅದ್ರಲ್ಲೂ ಡಿವೋರ್ಸ್ ಆದ್ಮೆಲಂತೂ ಸಮಂತಾಬೇಬಿ ಸಿಕ್ಕಾಪಟ್ಟೆ ಗ್ಲಾಮರ್ ಬೇಬಿಯಾಗಿದ್ದಾರೆ. ತುಂಡುಡುಗೆ ತೊಟ್ಟು ಪಡ್ಡೆಗಳಿಗೆ ಕಿಚ್ಚು ಹಚ್ಚುತ್ತಿರುವ ಸ್ಯಾಮ್, ಮೊನ್ನೆ ಇನ್ ಸ್ಟಾಗ್ರಾಂನಲ್ಲೊಂದು ಬಿಕಿನಿ ಫೋಟೋ ಹಾಕಿದ್ದರು. ಈ ಪಟ ನೋಡಿ, ಸ್ಯಾಮ್ ಹಾಟ್ನೆಸ್ ನೋಡಿ ಅನುಷ್ಕಾ ಶರ್ಮಾ ಕೂಡ ಕಮೆಂಟ್ ಮಾಡಿದ್ದರು.
ಸಮಂತಾ ಹೊಸ ಲುಕ್ನಲ್ಲಿ ಬಿಕಿನಿ ರೀತಿಯಾ ಬಟ್ಟೆ ಫೋಟೋ ಶೇರ್ ಮಾಡಿದ್ದು, ಸಾಮಾಜಿಕಾ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಈಗ ಈ ಬಗ್ಗೆ ಬಿಸಿಬಿಸಿ ಚರ್ಚೆಯೊಂದು ಶುರುವಾಗಿದೆ. ಅದು ಬಿಕಿನಿ ಅಲ್ವಂತೆ. ಬರ್ಬೆರಿ ಎಂಬ ಬ್ರ್ಯಾಂಡ್ ಕಂಪನಿಯ ಸಿಮ್ ಸೂಟ್ ಅಂತೆ. ಇದ್ರ ಬೆಲೆ 400 ಡಾಲರ್. ಅಂದ್ರೆ ಇಂಡಿಯಾ ಕರೆನ್ಸಿಯಲ್ಲಿ 30 ಸಾವಿರ ರೂ. ಈ ಸಿಮ್ ಸೂಟ್ ಹಾಕಿ ಸಮಂತಾ ಇನ್ ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡೋದಿಕ್ಕೆ 90 ಲಕ್ಷ ಹಣ ಪಡೆದಿದ್ದಾಳಂತೆ.
ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಬೇಜಾನ್ ಆಕ್ಟಿವ್. ಅದ್ರಲ್ಲೂ ಇನ್ ಸ್ಟಾಗ್ರಾಂನಲ್ಲಿ ಈಕೆಗೆ ಬೇಜಾನ್ ಫಾಲೋವರ್ಸ್ ಇದ್ದಾರೆ. ನಾಲ್ಕೈದು ಬ್ರ್ಯಾಂಡ್ ಬಟ್ಟೆಗಳ ರಾಯಭಾರಿಯಾಗಿರುವ ಸಮಂತಾ ಇದ್ರಿಂದನೇ ತಿಂಗಳಿಗೆ ಎರಡರಿಂದ ಮೂರು ಕೋಟಿ ಹಣ ಪಡೆಯುತ್ತಾಳಂತೆ.