ಸೌತ್ ಬ್ಯೂಟಿ ಸಮಂತಾ ಹಾಗೂ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಜೋಡಿಯಾಗಿ ಮೋಡಿ ಮಾಡಲು ಸಜ್ಜಾಗಿರುವ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಜೋಡಿ ಸಿನಿಮಾ ಹೇಗಿರಲಿದೆ? ಟೈಟಲ್ ಏನು ಇರಬಹುದು ಅಂತಾ ಕಾಯ್ತಿದ್ದ ಫ್ಯಾನ್ಸ್ ಗೆ ಗುಡ್ ನ್ಯೂಸ್ ಸಿಕ್ಕಿದೆ. ಇವತ್ತು ಸಿನಿಮಾ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರಕ್ಕೆ ಖುಷಿ ಎಂದು ಟೈಟಲ್ ಇಡಲಾಗಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಅನಾವರಣಗೊಂಡಿದೆ.
ಫಸ್ಟ್ ಲುಕ್ ವಿಡಿಯೋ ಝಲಕ್ ನಲ್ಲಿ ಸಮಂತಾ ಸೀರೆ ಧರಿಸಿ, ಮದುಮಗಳಂತೆ ರೆಡಿಯಾಗಿದ್ದಾರೆ. ವಿಜಯ್ ದೇವರಕೊಂಡ ಕಾಶ್ಮೀರಿ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಿವ ನಿರ್ವನ್ ಸಿನಿಮಾಗೆ ನಿರ್ದೇಶನ ಮಾಡಿದ್ದು, ಇದೊಂದು ಎಪಿಕ್ ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ.
ಫಸ್ಟ್ ಲುಕ್ ಜೊತೆಗೆ ಖುಷಿ ಸಿನಿಮಾ ಬಿಡುಗಡೆ ದಿನಾಂಕ ಕೂಡ ಅನೌನ್ಸ್ ಆಗಿದೆ. ಇದೇ ವರ್ಷದ ಡಿಸೆಂಬರ್ 23ರಂದು ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ. ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ ಚಿತ್ರ ಬಿಡುಗಡೆಯಾಗಲಿದೆ. ಅಂದಹಾಗೇ ಈ ಹಿಂದೆ ನಿರ್ದೇಶಕ ಶಿವ ನಿರ್ವನ್ ಸಮಂತಾ ನಟನೆಯ ಮಜಲಿ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಹಿಂದೆ ಮಹಾನಟಿ ಸಿನಿಮಾದಲ್ಲಿ ಸ್ಯಾಮ್-ವಿಜಯ್ ಒಟ್ಟಿಗೆ ಕೆಲಸ ಮಾಡಿದ್ದು, ಇದೀಗ ಖುಷಿ ಸಿನಿಮಾದಲ್ಲಿ ಜೋಡಿಯಾಗಿ ನಟಿಸ್ತಿರುವುದು ಅಭಿಮಾನಿಗಳಿಗೆ ಡಬ್ಬಲ್ ಖುಷಿ ಕೊಟ್ಟಿದೆ.