ಸುಭಾಷಿತ :

Wednesday, January 29 , 2020 9:36 PM

ಚರ್ಚೆಗೆ ಕಾರಣವಾಗಿದೆ ‘ಟಾಲಿವುಡ್ ನಟಿ’ ಸಮಂತಾ ಬಗ್ಗೆ ಹಬ್ಬಿರುವ ಈ ವದಂತಿ..?


Friday, November 22nd, 2019 8:57 pm

ಸಿನಿಮಾ ಡೆಸ್ಕ್ :   ಟಾಲಿವುಡ್ ಕ್ಯೂಟ್ ಕಪಲ್ಸ್ ನಾಗಚೈತನ್ಯ ಹಾಗೂ ಸಮಂತಾ ಜೋಡಿ 2017 ಅಕ್ಟೋಬರ್ 6 ರಂದು ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ನಟಿ ಸಮಂತಾ ಗರ್ಭೀಣಿ ಎಂಬ ವದಂತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಬಲ್ಲ ಮೂಲಗಳ ಪ್ರಕಾರ, ಸಮಂತಾ ಈಗ ಎರಡು ತಿಂಗಳ ಗರ್ಭಿಣಿ ಎನ್ನಲಾಗುತ್ತಿದೆ. ಅಕ್ಕಿನೇನಿ ಕುಟುಂಬದ ಆಪ್ತಮೂಲಗಳು ಈ ಬಗ್ಗೆ ಮಾಹಿತಿ ನೀಡಿದೆ. ಒಂದುವೇಳೆ, ಈ ಸುದ್ದಿ ನಿಜವಾದಲ್ಲಿ ಅಕ್ಕಿನೇನಿ ಕುಟುಂಬಕ್ಕೆ ಇದು ಸಂತಸ ವಿಚಾರ. ಸಮಂತಾ ಈಗ ಎರಡು ತಿಂಗಳ ಗರ್ಭಿಣಿ ಆಗಿರುವುದರಿಂದ ಇನ್ನುಮುಂದೆ ಆರೋಗ್ಯ ಕಡೆ ಹೆಚ್ಚಿನ ಗಮನ ನೀಡುವ ಅವಶ್ಯಕತೆ ಇದೆ. ಹಾಗಾಗಿ, 2020ರ ಜನವರಿಯಿಂದ ಅವರು ಸಿನಿಮಾರಂಗದಿಂದ ಅವರು ದೂರ ಇರಲಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಸಮಂತಾ ’96’ ಚಿತ್ರದ ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಶರ್ವಾನಂದ್ ನಟಿಸುತ್ತಿದ್ದಾರೆ. ಈಗಾಗಲೇ ಆ ಸಿನಿಮಾದ ಬಹುತೇಕ ಶೂಟಿಂಗ್ ಕೂಡ ಮುಗಿದಿದೆ, ಇನ್ನೂ ಈ ಬಗ್ಗೆ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಟಾಲಿವುಡ್ ನ ಕ್ಯೂಟ್ ಕಪಲ್ಸ್ ನಾಗಚೈತನ್ಯ ಹಾಗೂ ಸಮಂತಾ ಟಾಲಿವುಡ್ ನ ಜನಪ್ರಿಯ ಜೋಡಿಯಾಗಿದೆ. ಆಟೋನಗರ್ ಸೂರ್ಯ, ಮನಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಈ ಜೋಡಿ ಒಟ್ಟಾಗಿ ನಟಿಸಿದ್ದರು.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions