ಚಂಡೀಗಢ: ಪಂಜಾಬ್‌ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಗಳು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಲು ಮುಂಬೈನಲ್ಲಿ ಸಂಚು ನಡೆಸಿದ್ದರು ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಭಾನುವಾರ ಹೇಳಿದ್ದಾರೆ.

ಮೂಸೆವಾಲಾ ಹತ್ಯೆಯಾದ ನಂತರ ಸಲ್ಮಾನ್ ಖಾನ್ ಹಾಗೂ ಅವರ ತಂದೆ ಸಲೀಂ ಖಾನ್‌ಗೆ ಬೆದರಿಕೆ ಪತ್ರ ಕಳುಹಿಸಲಾಗಿತ್ತು. ʻಸಲೀಂ ಖಾನ್ ಮತ್ತು ಅವರ ಮಗ ಸಲ್ಮಾನ್ ಖಾನ್ ಇಬ್ಬರೂ ಶೀಘ್ರದಲ್ಲೇ ಗಾಯಕ ಸಿಧು ಮೂಸೆವಾಲಾ (ತೇರಾ ಮೂಸವಾಲಾ ಬನಾ ಡೆಂಗೆ) ಅವರ ಅದೃಷ್ಟವನ್ನು ಎದುರಿಸಲಿದ್ದಾರೆʼ ಎಂದು ಹಿಂದಿಯಲ್ಲಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಪೊಲೀಸ್ ಮೂಲಗಳು ಹೇಳಿವೆ.

ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಸೂಚನೆಯ ಮೇರೆಗೆ ಈ ಸಂಚು ನಡೆಸಲಾಯಿತು. ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಲು ಸಚಿನ್ ಬಿಷ್ಣೋಯ್ ಮತ್ತು ಸಂತೋಷ್ ಯಾದವ್ ಅವರೊಂದಿಗೆ ಮುಂಬೈನಲ್ಲಿ ಸಂಚು ನಡೆಸಿದ್ದರು ಎಂದು ಬಂಧಿತ ಆರೋಪಿಗಳಲ್ಲಿ ಒಬ್ಬರಾದ ಕಪಿಲ್ ಪಂಡಿತ್ ವಿಚಾರಣೆಯ ಸಮಯದಲ್ಲಿ ಹೇಳಿದ್ದಾರೆ. ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ನಾವು ಅವರನ್ನು ಸಹ ವಿಚಾರಣೆ ಮಾಡುತ್ತೇವೆ ಎಂದಿದ್ದಾರೆ.

BIG NEWS: ಜ್ಞಾನವಾಪಿ ಮಸೀದಿ ಪ್ರಕರಣ: ಇಂದು ಭವಿಷ್ಯ ನಿರ್ಧಾರ? | Gyanvapi Mosque Case

ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಲು, “ಸಂಪತ್ ನೆಹ್ರಾ ಅವರ ಸಹಯೋಗದಲ್ಲಿ ಒಂದು ಯೋಜನೆಯನ್ನು ಮಾಡಲಾಗಿದೆ. ಅದು ನಮಗೆ ಮೇ 30 ರಂದು ತಿಳಿದಿದೆ” ಎಂದು ಡಿಜಿಪಿ ಯಾದವ್ ಹೇಳಿದ್ದಾರೆ.

ಕೇಂದ್ರ ಏಜೆನ್ಸಿಗಳ ಸಹಾಯದಿಂದ ಇಂಟರ್‌ಪೋಲ್ ಮೂಲಕ ದರೋಡೆಕೋರ ಗೋಲ್ಡಿ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಮೂಸೆವಾಲಾ ಸಾವಿನ ಪ್ರಕರಣದಲ್ಲಿ ಒಟ್ಟು 23 ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

ಪ್ರಮುಖ ಆರೋಪಿ ದೀಪಕ್ ಮುಂಡಿ ಮತ್ತು ಆತನ ಇಬ್ಬರು ಸಹಚರರಾದ ಕಪಿಲ್ ಪಂಡಿತ್ ಮತ್ತು ರಾಜಿಂದರ್ ಅವರನ್ನು ನೇಪಾಳ ಪೊಲೀಸರು ಶನಿವಾರ ಬಂಧಿಸಿದ್ದಾರೆ. ನೇಪಾಳದಲ್ಲಿರುವ ರಾಜಿಂದರ್ ಜೋಕರ್ ಗೋಲ್ಡಿ ಬ್ರಾರ್ ಜೊತೆ ಸಂಪರ್ಕದಲ್ಲಿದ್ದು ದುಬೈಗೆ ಪಲಾಯನ ಮಾಡಲು ಸಿದ್ಧತೆ ನಡೆಸಿದ್ದು, ಅಲ್ಲಿಂದ ನಕಲಿ ಪಾಸ್‌ಪೋರ್ಟ್‌ನಲ್ಲಿ ಥಾಯ್ಲೆಂಡ್‌ಗೆ ಹೋಗಲು ಪಣ ತೊಟ್ಟಿದ್ದ ಎಂದು ಡಿಜಿಪಿ ತಿಳಿಸಿದ್ದಾರೆ.

ಪ್ರಕರಣದ ತನಿಖೆಗೆ 105 ದಿನಗಳನ್ನು ತೆಗೆದುಕೊಂಡಿತು. ಆರೋಪಿಗಳು ತಲೆಮರೆಸಿಕೊಂಡಿರುವ ರಾಜ್ಯಗಳು ಹರಿಯಾಣ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

BIGG NEWS : ಮೇಲ್ಮನೇಲಿ ಬಿಜೆಪಿಗೆ ಪೂರ್ಣ ಬಹುಮತ : ಬಸವರಾಜ ಹೊರಟ್ಟಿ ಮತ್ತೆ ಸಭಾಪತಿ?

BIGG NEWS : KPTCL ಪರೀಕ್ಷೆ ಅಕ್ರಮ : ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಅರೆಸ್ಟ್

Share.
Exit mobile version