ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಅವರ ತಂದೆ ಮತ್ತು ಬರಹಗಾರ ಸಲೀಮ್ ಖಾನ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಪತ್ರ ಬಂದಿದೆ. ಬಾಂದ್ರಾ ಬ್ಯಾಂಡ್ ಸ್ಟಾಂಡ್ ವಾಯುವಿಹಾರದ ಬಳಿ ಪತ್ರ ಪತ್ತೆಯಾಗಿದೆ. ಬಾಂದ್ರಾದಿಂದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೋಲಿಸರಿಂದ ಎಫ್‌ಐಆರ್ cದಾಖಲಿಸಲಾಗಿದೆ.
ಪಂಜಾಬ್ನ ಮಾನ್ಸಾ ಗ್ರಾಮದಲ್ಲಿ ಕಳೆದ ವಾರ ಪಂಜಾಬಿ ಗಾಯಕ ಮತ್ತು ರಾಜಕಾರಣಿ ಸಿಧು ಮೂಸ್ ವಾಲಾ ಅವರನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯರು ಗುಂಡಿಕ್ಕಿ ಕೊಂದಿರುವ ಆರೋಪವಿದೆ. ಈ ನಡುವೆ ಕೃಷ್ಣಮೃಗ ಬೇಟೆ ಪ್ರಕರಣವು ನ್ಯಾಯಾಲಯದಲ್ಲಿದ್ದಾಗ 2018 ರಲ್ಲಿ ಗ್ಯಾಂಗ್ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿತ್ತು.
.