ಲಕ್ನೋ: ಲಕ್ನೋದ ರೈಲ್ವೇ ಸೇತುವೆಯ ಹಳಿಗಳ ಮೇಲೆ ರೀಲ್ಸ್‌ಗಾಗಿ ವೀಡಿಯೊವನ್ನು ಚಿತ್ರೀಕರಿಸಿದ್ದ‌ ಬಾಲಿವುಡ್ ನಟ ​ಸಲ್ಮಾನ್​ ಖಾನ್‌ರನ್ನೇ ಹೋಲುವ ಕಂಟೆಂಟ್ ಕ್ರಿಯೇಟರ್ ಮತ್ತು ಡಾಪಲ್‌ಗ್ಯಾಂಗರ್ ಅಜಮ್ ಅನ್ಸಾರಿ ವಿರುದ್ಧ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಎಫ್‌ಐಆರ್ ದಾಖಲಿಸಿದೆ.

ವರದಿಗಳ ಪ್ರಕಾರ, ಸ್ಥಳೀಯ ನಿವಾಸಿ ಅಜೀಮ್ ಅಹ್ಮದ್ ವೀಡಿಯೋ ಚಿತ್ರೀಕರಣವನ್ನು ಲಕ್ನೋದ ರೈಲ್ವೇ ಸೇತುವೆಯ ಹಳಿಗಳ ಮೇಲೆ  ರೀಲ್ಸ್ ಮಾಡಿದ್ದರು. ಈ ವೇಳೆ ಜನರಿಗೆ ತೊಂದರೆ ಕೂಡ ಉಂಟು ಮಾಡಿದ್ದರು. ಇನ್‌ಸ್ಟಾಗ್ರಾಮ್ ​ರೀಲ್ಸ್ ಅನ್ನು ಹಂಚಿಕೊಂಡ ನಂತ್ರ ಈ ವಿಷಯ ಬೆಳಕಿಗೆ ಬಂದಿದೆ. ನದಿಯ ರೈಲ್ವೆ ಸೇತುವೆಯ ಮೇಲೆ ರೀಲ್ಸ್​ ಮಾಡಿದ್ದು, ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಅನ್ಸಾರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ವೀಡಿಯೊದಲ್ಲಿ, ಅನ್ಸಾರಿ ರೈಲ್ವೆ ಸೇತುವೆಯ ಹಳಿಗಳ ಮೇಲೆ ನಿಂತು ಗಿಟಾರ್​ ಹಿಡಿದು ಫೋಸ್​ ನೀಡುತ್ತಾ ಹಾಡೊಂದಕ್ಕೆ ರೀಲ್ಸ್​ ಮಾಡಿದ್ದಾನೆ. ಬಳಿಕ ಸಿಗರೇಟ್​ ಸೇದುತ್ತಾ ಹಳಿಗಳ ಮೇಲೆ ನಡೆದಾಡಿದ್ದಾನೆ. ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು.

BIGG BREAKING NEWS: ಬಿಹಾರದಲ್ಲಿ ಉದ್ಯೋಗಕ್ಕಾಗಿ ಭೂಮಿ ಹಗರಣ: ಆರ್‌ಜೆಡಿಯ ಇಬ್ಬರು ನಾಯಕರ ಮೇಲೆ CBI ದಾಳಿ

ಲಾಕ್‌ಡೌನ್ ವೇಳೆ ವಿಮಾನದಲ್ಲಿ ತನ್ನ ಕಾರ್ಮಿಕರನ್ನು‌ ಮನೆಗೆ ಕಳುಹಿಸಿಕೊಟ್ಟಿದ್ದ ರೈತ ಇಂದು ದೇವಸ್ಥಾನಲ್ಲಿ ಶವವಾಗಿ ಪತ್ತೆ

BIGG NEWS : ಶಾಲೆಗಳ ಬಿಸಿಯೂಟ ಸಿಬ್ಬಂದಿಗಳಿಗೆ `ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ಯಡಿ `ಜಾಬ್ ಕಾರ್ಡ್’ : ರಾಜ್ಯ ಸರ್ಕಾರ ಆದೇಶ

Share.
Exit mobile version