ಸುಭಾಷಿತ :

Saturday, December 14 , 2019 9:18 AM

ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ : ಸೈನಾಗೆ ಸೋಲು, ಕಶ್ಯಪ್ ಮುನ್ನಡೆ


Wednesday, November 6th, 2019 1:37 pm

ಫುಜೊ : ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಹಿರಿಯ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿ ನಿರ್ಗಮನದ ಹಾದಿ ಹಿಡಿದಿದ್ದಾರೆ.

ಬುಧವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲೇ ವಿಶ್ವ ನಂ.9 ಆಟಗಾರ್ತಿ ಸೈನಾ ನೆಹ್ವಾಲ್, ಸ್ಥಳೀಯ ಫೇವರಿಟ್ ಕಾಯಿ ಯಾನ್ ಯಾನ್ ವಿರುದ್ಧ 9-21, 12-21ರ ಅಂತರದಲ್ಲಿ ಸೋಲನುಭವಿಸಿದರು.

ಇನ್ನು ಪುರುಷ ಸಿಂಗಲ್ಸ್ ವಿಭಾಗದಲ್ಲಿ ಸೈನಾ ಪತಿ ಪರುಪ್ಪಳ್ಳಿ ಕಶ್ಯಪ್, ಥಾಯ್ಲೆಂಡ್‌ನ ಸಿತಿಕೋಮ್ ಥಾಮಸಿನ್ ವಿರುದ್ಧ ನೇರ ಸೆಟ್‌ಗಳಲ್ಲಿ ಗೆಲುವು ಬಾರಿಸಿ ಮುನ್ನಡೆಸಿದರು.

ಕಶ್ಯಪ್, 21-14, 21-13ರ ಅಂತರದಲ್ಲಿ ಸಿತಿಕೋಮ್ ಮಣಿಸಿ ಮುನ್ನಡೆಸಿದರು. 43 ನಿಮಿಷಗಳ ಹೋರಾಟದಲ್ಲಿ ಕಶ್ಯಪ್ ಗೆಲುವಿನ ನಗೆ ಬೀರಿದರು. ಎರಡನೇ ಸುತ್ತಿನ ಹೋರಾಟದಲ್ಲಿ ಏಳನೇ ಶ್ರೇಯಾಂಕದ ಡೆನ್ಮಾರ್ಕ್‌ನ ವಿಕ್ಟರ್ ಅಲೆಕ್ಸನ್ ಸವಾಲನ್ನು ಎದುರಿಸಲಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions