ಸಾಗರ ಅರಣ್ಯಾಧಿಕಾರಿಗಳ ಮಿಂಚಿನ ಕಾರ್ಯಾಚರಣೆ: ಶ್ರೀಗಂಧದ ಮರ ಕಡಿತಲೆ ಮಾಡಿದ ಆರೋಪಿ ಅರೆಸ್ಟ್

ಶಿವಮೊಗ್ಗ: ಸಾಗರದ ಅರಣ್ಯಾಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ, ಶ್ರೀಗಂಧದ ಮರ ಕಡಿಯುತ್ತಿದ್ದ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ ಮಾಲು ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದ ಸಾಗರ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯ ಬರದಳ್ಳಿ ಗ್ರಾಮದ ಸರ್ವೆ ನಂ.70ರಲ್ಲಿ ಶ್ರೀಗಂಧದ ಮರ ಕಡಿತಲೆ ಮಾಡುತ್ತಿದ್ದ ಮಾಹಿತಿಯನ್ನು ಸಾರ್ವಜನಿಕರೊಬ್ಬರು ಅರಣ್ಯ ಇಲಾಖೆಗೆ ನೀಡಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಆರ್ ಎಫ್ ಓ ಅಣ್ಣಪ್ಪ ಅವರು ಡಿಎಫ್ಓ ಮೋಹನ್ ಕುಮಾರ್ ಅವರ ಗಮನಕ್ಕೆ … Continue reading ಸಾಗರ ಅರಣ್ಯಾಧಿಕಾರಿಗಳ ಮಿಂಚಿನ ಕಾರ್ಯಾಚರಣೆ: ಶ್ರೀಗಂಧದ ಮರ ಕಡಿತಲೆ ಮಾಡಿದ ಆರೋಪಿ ಅರೆಸ್ಟ್