ನಾಳೆ ಬೆಂಗಳೂರಲ್ಲಿ ‘ಏಡ್ಸ್ ನಿಯಂತ್ರಣ’ ಸಂಬಂಧ ‘ಸುರಕ್ಷಾ ಸಂಕಲ್ಪ ಕಾರ್ಯಾಗಾರ’ ಆಯೋಜನೆ
ಬೆಂಗಳೂರು: ದೇಶಾದ್ಯಂತ ಅನುಷ್ಠಾನಗೊಳ್ಳುತ್ತಿರುವ ‘ಮಿಷನ್ ಏಡ್ಸ್ ಸುರಕ್ಷಾ’ ಯೋಜನೆಯ ಭಾಗವಾಗಿ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು (NACO) ಬೆಂಗಳೂರಿನಲ್ಲಿ ನಾಳೆ ‘ಸುರಕ್ಷಾ ಸಂಕಲ್ಪ ಕಾರ್ಯಗಾರ’ವನ್ನು ಆಯೋಜಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ NACO ಮಹಾನಿರ್ದೇಶಕರಾದ ಡಾ.ರಾಕೇಶ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯಗಾರ ಆಯೋಜಿಸಲಾಗಿದೆ. ಪ್ರಮುಖ ಉದ್ದೇಶಗಳು: 1ನೇ ಡಿಸೆಂಬರ್ 2027 ರ ವೇಳೆಗೆ ಎಚ್‌ಐವಿ ಸಾಂಕ್ರಾಮಿಕದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು ಮತ್ತು 2030ರ ವೇಳೆಗೆ ಏಡ್ಸ್ ಅನ್ನು ಸಾರ್ವಜನಿಕ ಆರೋಗ್ಯದ ಭೀತಿಯಿಂದ ಮುಕ್ತಗೊಳಿಸುವ ವಿಶ್ವಸಂಸ್ಥೆಯ ಗುರಿಯನ್ನು ತಲುಪಲು ಭಾರತವು ಹೊಂದಿರುವ ಅಂತಾರಾಷ್ಟ್ರೀಯ ಬದ್ಧತೆಯ ಗುರಿ ಸಾಧಿಸುವ ನಿಟ್ಟಿನಲ್ಲಿ ಈ ಕಾರ್ಯಗಾರವು ಅತ್ಯಂತ ನಿರ್ಣಾಯಕವಾಗಿದೆ. ದೇಶಾದ್ಯಂತ ಆಯೋಜಿಸಲಾಗುತ್ತಿರುವ 12 ಪ್ರಾದೇಶಿಕ ಕಾರ್ಯಾಗಾರಗಳ ಪೈಕಿ ಬೆಂಗಳೂರಿನ ಆಯೋಜಿಸುತ್ತಿರುವ ಈ ಕಾರ್ಯಕ್ರಮವು ಸರಣಿಯ ಭಾಗವಾಗಿದೆ. ಜಿಲ್ಲಾ ಮಟ್ಟದಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸುವುದು ಮತ್ತು ವಿವಿಧ ಇಲಾಖೆಗಳ ನಡುವೆ ಸಮನ್ವಯತೆಯನ್ನು ಬಲಪಡಿಸುವುದು ಇದರ ಕಾರ್ಯಗಾರದ ಉದ್ದೇಶವಾಗಿದೆ. ಈ ಯೋಜನೆಯಡಿ ದೇಶದ 18 … Continue reading ನಾಳೆ ಬೆಂಗಳೂರಲ್ಲಿ ‘ಏಡ್ಸ್ ನಿಯಂತ್ರಣ’ ಸಂಬಂಧ ‘ಸುರಕ್ಷಾ ಸಂಕಲ್ಪ ಕಾರ್ಯಾಗಾರ’ ಆಯೋಜನೆ
Copy and paste this URL into your WordPress site to embed
Copy and paste this code into your site to embed