ಹಿಂದಿ ಕಿರುತೆರೆ ನಟ ಸಚಿನ್ ಕುಮಾರ್ ಹೃದಯಾಘಾತದಿಂದ ನಿಧನ – Kannada News Now


Film Other Film

ಹಿಂದಿ ಕಿರುತೆರೆ ನಟ ಸಚಿನ್ ಕುಮಾರ್ ಹೃದಯಾಘಾತದಿಂದ ನಿಧನ

ಮುಂಬೈ : ಹಿಂದಿಯ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ‘ಕಹಾನಿ ಘರ್ ಘರ್ ಕಿ’ ಧಾರಾವಾಹಿಯ ನಟ ಸಚಿನ್ ಕುಮಾರ್ ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದಿ ಕಿರುತೆರೆ ನಟರಾದ ರಾಕೇಶ್ ಪೌಲ್, ಚೇತನ್ ಹನ್ಸರಾಜ್, ವಿನೀತ್ ರೈನಾ, ಸುರಭಿ ತಿವಾರಿ ಮುಂತಾದವರು ಸಚಿನ್ ನಿಧನ ಸುದ್ದಿಯಿಂದ ಶಾಕ್ ಆಗಿದ್ದು ಸಂತಾಪ ಸೂಚಿಸಿದ್ದಾರೆ.

ಹಲವು ವರ್ಷಗಳಿಂದ ಸಚಿನ್ ಬಣ್ಣದ ಬದುಕಿನಿಂದ ದೂರ ಉಳಿದು ಫೋಟೋಗ್ರಫಿಯಲ್ಲಿ ತೊಡಗಿಕೊಂಡಿದ್ದರು. ಇವರ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸಿರುವ ಗೆಳೆಯ ರಾಕೇಶ್ ಪೌಲ್ ‘ ಸಾವಿನ ಸುದ್ದಿ ಶಾಕ್ ತಂದಿದೆ. ಆತನನ್ನು ಕೊನೆಯ ಬಾರಿ ನೋಡಲು ಸಾಧ್ಯವಾಗಲಿಲ್ಲ. ಮನೆಯಲ್ಲಿಯೆ ಸಾವನ್ನಪ್ಪಿದ್ದಾರೆ. ತನ್ನ ಕೊಠಡಿ ಬಾಗಿಲು ಹಾಕಿಕೊಂಡು ರಾತ್ರಿ ಮಲಗಿದವರು ಬೆಳಗ್ಗೆ ಬಾಗಿಲು ತೆಗೆದಿರಲಿಲ್ಲ. ಅವರ ತಂದೆತಾಯಿ ಸಾಕಷ್ಟು ಪ್ರಯತ್ನಿಸಿ ಕೊನೆಗೆ ಬಾಗಿಲು ತೆರೆದು ನೋಡಿದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ. ಬಹುಶಃ ತಡರಾತ್ರಿ ಅಥವಾ ಮುಂಜಾನೆ ಅವರಿಗೆ ಹೃದಯಾಘಾತವಾಗಿರಬಹುದು” ಎಂದಿದ್ದಾರೆ.