ನವದೆಹಲಿ : ರುಪೇ ಮತ್ತು ಯುಪಿಐ ತಂತ್ರಜ್ಞಾನವು ವಿಶ್ವದಲ್ಲಿ ಭಾರತದ ಗುರುತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಹಣಕಾಸು ಸೇವೆಗಳ ದಕ್ಷತೆಯನ್ನು ಹೆಚ್ಚಿಸುವುದು’ ಎಂಬ ವಿಷಯದ ಕುರಿತು ಬಜೆಟ್ ನಂತರದ ವೆಬಿನಾರ್ ಅನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು. ಇದೇ ವೇಳೆ ಅವರು ‘ಇಂಡಸ್ಟ್ರಿ 4.0’ ಯುಗದಲ್ಲಿ, ಭಾರತ ಅಭಿವೃದ್ಧಿಪಡಿಸಿದ ವೇದಿಕೆಗಳು ಜಗತ್ತಿಗೆ ಮಾದರಿಯಾಗುತ್ತಿವೆ” ಎಂದು ತಿಳಿಸಿದ್ದಾರೆ.
ಯುಪಿಐ ಇಡೀ ಜಗತ್ತಿಗೆ ಆರ್ಥಿಕ ಸೇರ್ಪಡೆ ಮತ್ತು ಸಬಲೀಕರಣದ ಸಾಧನವಾಗಬೇಕು, ಅದಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕು. ನಮ್ಮ ಹಣಕಾಸು ಸಂಸ್ಥೆಗಳು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಲು ಫಿನ್ಟೆಕ್ನೊಂದಿಗೆ ಗರಿಷ್ಠ ಪಾಲುದಾರಿಕೆಯನ್ನು ಹೊಂದಿರಬೇಕು ಎಂದು ನಾನು ಸೂಚಿಸುತ್ತೇನೆ” ಎಂದು ಪಿಎಂ ಮೋದಿ ಹೇಳಿದರು.
Amrit Kaal Budget lays the roadmap of an all inclusive financial sector for India's growth. Sharing my remarks at a webinar. https://t.co/lLUyjEXCMR
— Narendra Modi (@narendramodi) March 7, 2023