ಕೆಎನ್​ಎನ್​ ಡಿಜಿಟಲ್ ಡೆಸ್ಕ್ : ನೂಪುರ್ ಶರ್ಮಾ ಮತ್ತು ಅವರ ಪ್ರವಾದಿ ಹೇಳಿಕೆ ಕುರಿತು ಸುಪ್ರೀಂ ಕೋರ್ಟ್‌ನ ಅವಲೋಕನದ ಕುರಿತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ಕೋಪ ಮತ್ತು ದ್ವೇಷದ ವಾತಾವರಣವನ್ನು ಕೇಂದ್ರ ಸರ್ಕಾರ ಸೃಷ್ಟಿಸುತ್ತಿದೆ ಹೊರತು ಒಬ್ಬ ವ್ಯಕ್ತಿಯಿಂದಲ್ಲ ಎಂದು ನೂಪುರ್ ಶರ್ಮಾ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ.

ಕೇರಳದ ವಯನಾಡ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಸುಪ್ರೀಂ ಕೋರ್ಟ್ ಈ ಮಾತನ್ನು ಹೇಳಿದೆ. ಆದರೆ ದೇಶದಲ್ಲಿ ವಾತಾವರಣವನ್ನು ಸೃಷ್ಟಿಸಿರುವುದು ಆಡಳಿತಾರೂಢ ಸರ್ಕಾರ. ಈ ಹೇಳಿಕೆ ನೀಡಿದ್ದು ವ್ಯಕ್ತಿಯಲ್ಲ. ದೇಶದಲ್ಲಿ ಈ ವಾತಾವರಣವನ್ನು ಪ್ರಧಾನಿ, ಗೃಹ ಸಚಿವರು ಹಾಗೂ ಬಿಜೆಪಿ ಮತ್ತು ಆರ್‌ಎಸ್‌ಎಸ್ಸೃಷ್ಟಿಸಿದೆ. ಈ ದ್ವೇಷದ ವಾತಾವರಣ ಭಾರತ ಮತ್ತು ನಮ್ಮ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.

ಇಂದು ಸುಪ್ರೀಂ ಕೋರ್ಟ್ ಪ್ರವಾದಿ ಹೇಳಿಕೆಯ ಕುರಿತಂತೆ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಬೇಜವಾಬ್ದಾರಿ ಹೇಳಿಕೆಗಳು ಇಡೀ ದೇಶಕ್ಕೆ ಬೆಂಕಿ ಹಚ್ಚಿದವು. ಇದಕ್ಕೆ ಇಡೀ ದೇಶದ ಜನತೆ ಬಳಿ ಕ್ಷಮೆಯಾಚಿಸಬೇಕು ಎಂದಿದೆ.

ತಮ್ಮ ಸಂಸದೀಯ ಕ್ಷೇತ್ರಕ್ಕೆ ಭೇಟಿ ನೀಡಿರುವ ಮಾಜಿ ಕಾಂಗ್ರೆಸ್ ಮುಖ್ಯಸ್ಥರು ವಯನಾಡ್‌ನಲ್ಲಿರುವ ತಮ್ಮ ಕಚೇರಿಯ ಮೇಲೆ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದು ದುರದೃಷ್ಟಕರ, ಇದು ನನ್ನ ಕಚೇರಿಯಲ್ಲ, ಇದು ವಯನಾಡಿನ ಜನರಿಗೆ ಸೇರಿದ್ದು, ಇದು ಮೂರ್ಖತನವಾಗಿದೆ ಎಂದಿದ್ದಾರೆ.

ಜೂನ್ 24 ರಂದು, ಸಿಪಿಐ(ಎಂ) ಯುವ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಮೆರವಣಿಗೆಯನ್ನು ಕೈಗೊಂಡು ವಯನಾಡಿನಲ್ಲಿ ರಾಹುಲ್ ಗಾಂಧಿಯವರ ಕಚೇರಿಯನ್ನು ಧ್ವಂಸಗೊಳಿಸಿತು. ಪರಿಸರ ಸೂಕ್ಷ್ಮ ವಲಯ (ಇಎಸ್‌ಜೆಡ್) ಕುರಿತ ಸುಪ್ರೀಂ ಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸದ ಆರೋಪದ ಮೇಲೆ ವಯನಾಡ್ ಸಂಸದರ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

Share.
Exit mobile version