ದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಅನ್ನು ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ದೇಶದ 15 ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಗೆ ಸೇರಿದ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಗಳು(ಎಎನ್‌ಐ) ದಾಳಿ ನಡೆಸಿ ನೂರಾರು ಕಾರ್ಯಕರ್ತರ ಬಂಧನ ಮತ್ತು ಈ ಸಂಘಟನೆ ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಬಗ್ಗೆ ಸಂಗ್ರಹಿಸಿರುವ ಸಾಕ್ಷ್ಯಗಳ ಆಧಾರದಲ್ಲಿ ಪಿಎಫ್‌ಐ ಅನ್ನು ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಗೃಹ ಸಚಿವ ಅಮಿತ್‌ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಜೊತೆ ಶೀಘ್ರದಲ್ಲೇ ಸಭೆ ನಡೆಸಲಿದ್ದು, ಅಲ್ಲಿ ಪಿಎಫ್‌ಐ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ. ನಂತ್ರ, ಕಾನೂನು ಸಲಹೆ ಪಡೆದು ಪಿಎಫ್‌ಐ ನಿಷೇಧಕ್ಕೆ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

BIGG NEWS : ಕರ್ತವ್ಯನಿರತ ಚಾಲಕ ವಿಶ್ರಾಂತಿಯಲ್ಲಿ ಮೃತಪಟ್ಟರೂ ವಿಮಾ ಪರಿಹಾರ ನೀಡಬೇಕು : ಹೈಕೋರ್ಟ್ ಮಹತ್ವದ ಆದೇಶ

BIGG NEWS : ರಾಜ್ಯದ ಜನತೆಗೆ ನೆಮ್ಮದಿಯ ಸುದ್ದಿ : ಹಾಲಿನ ಬೆಲೆ ಹೆಚ್ಚಳ ಪ್ರಸ್ತಾವನೆಗೆ ಸಿಎಂ ಬೊಮ್ಮಾಯಿ ಬ್ರೇಕ್!

BIG NEWS: ʻಅಟಾರ್ನಿ ಜನರಲ್ʼ ಆಗುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ನಿರಾಕರಿಸಿದ ʻಮುಕುಲ್ ರೋಹಟಗಿʼ | Mukul Rohatgi

Share.
Exit mobile version