ಕೋಲಾರ: ಬೈಕ್ ಗೆ ಮತ್ತೊಂದು ವಾಹನ ಟಚ್ ಆದ ಕಾರಣ, ಜಗಳ ನಿರತರಾಗಿದ್ದ ವೇಳೆಯಲ್ಲಿ ಮಧ್ಯಪ್ರವೇಶಿಸಿ ಜಗಳ ಬಿಡಿಸೋದಕ್ಕೆ ಹೋದಂತ ಆರ್ ಎಸ್ ಎಸ್ ಮುಖಂಡನಿಗೆ ಚಾಕುವಿನಿಂದ ಇರಿದ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಮಾಲೂರಿನ ಮಾರಿಕಾಂಬ ರಸ್ತೆಯಲ್ಲಿ ಬೈಕ್ ಗೆ ಮತ್ತೊಂದು ಗಾಡಿ ಟಚ್ ಆದ ಪರಿಣಾಮ, ಇಬ್ಬರು ಜಗಳದಲ್ಲಿ ನಿರತರಾಗಿದ್ದರು. ಈ ವೇಳೆ ಮಧ್ಯಪ್ರವೇಶಿಸಿದಂತ ಮಾಲೂರಿನ ಆರ್ ಎಸ್ ಎಸ್ ಮುಖಂಡ ರವಿ ಎಂಬುವರು, ಜಗಳ ಬಿಡಿಸೋದಕ್ಕೆ ಮುಂದಾಗಿದ್ದರು.

‘ಜನರ ಸಮಸ್ಯೆಗಳಿಗೆ ಪರಿಹಾರ ಹಾಗೂ ಮಾರ್ಗದರ್ಶನ’ ನೀಡುವ ಜ್ಯೋತಿಷಿಯಿಂದ ಇಂದಿನ ‘ರಾಶಿ ಭವಿಷ್ಯ’ ನೋಡಿ

ಈ ವೇಳೆಯಲ್ಲಿ ರವಿ ಅವರಿಗೆ ಕ್ಷಲ್ಲಕ ಕಾರಣಕ್ಕಾಗಿ ಇಬ್ಬರು ವ್ಯಕ್ತಿಗಳಿಂದ ಚಾಕುವಿನಿಂದ ಇರಿಯಲಾಗಿದೆ. ಇದರಿಂದಾಗಿ ಆರ್ ಎಸ್ ಎಸ್ ಮುಖಂಡ ರವಿ ಅವರ ಮುಖಕ್ಕೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಆರ್ ಎಸ್ ಎಸ್ ಕಾರ್ಯಕರ್ತರು, ಮಾಲೂರು ಬಸ್ ನಿಲ್ದಾಣದ ಎದುರು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಸಂಬಂಧ ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮನ್‌ವೆಲ್ತ್ ಗೇಮ್ಸ್ 2022 : ಮಹಿಳೆಯರ 10000 ಮೀಟರ್ ರೇಸ್ ವಾಕ್ ಫೈನಲ್ನಲ್ಲಿ ʻಬೆಳ್ಳಿ ಪದಕʼ ಗೆದ್ದ ʼಪ್ರಿಯಾಂಕಾ ಗೋಸ್ವಾಮಿ ʼ | Priyanka Goswami

Share.
Exit mobile version